ಕೈವ್, ಫೆ 26 (DaijiworldNews/KP): ನನಗೆ ಮದ್ದುಗುಂಡುಗಳು ಬೇಕು, ಸವಾರಿ ಅಲ್ಲ ಎಂದು ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಹೇಳಿದ್ದಾರೆ.
ಶನಿವಾರ ಮುಂಜಾನೆ ರಷ್ಯಾದ ಪಡೆಗಳು ಕೈವ್ ಕಡೆಗೆ ನುಗ್ಗಿದಾಗ ಸ್ಫೋಟಗಳು ನಗರದಾದ್ಯಂತ ಪ್ರತಿಧ್ವನಿಸಿದವು. ಸ್ಥಳಾಂತರಿಸಲು ಯು.ಎಸ್. ಸಹಾಯವನ್ನು ನಿರಾಕರಿಸಿದ ಉಕ್ರೇನಿಯನ್ ಅಧ್ಯಕ್ಷ, ತನ್ನ ಭವಿಷ್ಯವನ್ನು ನಿರ್ಧರಿಸಬಲ್ಲ ಮುತ್ತಿಗೆಯ ವಿರುದ್ಧ ದೃಢವಾಗಿ ನಿಲ್ಲುವಂತೆ ದೇಶವನ್ನು ಒತ್ತಾಯಿಸಿದರು ಮತ್ತು “ಹೋರಾಟ ಇಲ್ಲಿದೆ” ಎಂದು ಹೇಳಿದರು.
ಅಧ್ಯಕ್ಷರು ಕದನ ವಿರಾಮಕ್ಕೆ ಮನವಿ ಮಾಡಿದರು. ಅನೇಕ ನಗರಗಳು ಆಕ್ರಮಣಕ್ಕೆ ಒಳಗಾಗಿವೆ ಎಂದು ಎಚ್ಚರಿಕೆ ನೀಡಿದರು. “ಈ ರಾತ್ರಿ ನಾವು ದೃಢವಾಗಿ ನಿಲ್ಲಬೇಕು. ಉಕ್ರೇನ್ ನ ಭವಿಷ್ಯವನ್ನು ಇದೀಗ ನಿರ್ಧರಿಸಲಾಗುತ್ತಿದೆ “ಎಂದು ಅವರು ಹೇಳಿದರು.
ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಉಕ್ರೇನ್ ಸರ್ಕಾರವನ್ನು ಉರುಳಿಸಲು ಮತ್ತು ಅದನ್ನು ತಮ್ಮದೇ ಆದ ಆಡಳಿತದೊಂದಿಗೆ ಸೇರಿಸಲು ನಿರ್ಧರಿಸಿದ್ದಾರೆ ಎಂಬ ಗುಪ್ತಚರ ವರದಿ ಆಧಾರದ ಮೇಲೆ ಝೆಲೆನ್ಸ್ಕಿಗೆ ಅಮೆರಿಕ ಹೇಳಿತ್ತು. ಈ ಕುರಿತಂತೆ ಸೆಲ್ಫಿ ವೀಡಿಯೋ ಬಿಡುಗಡೆ ಮಾಡಿದ ಅವರು, “ನಾನು ಇಲ್ಲಿದ್ದೇನೆ. ನಾವು ಯಾವುದೇ ಕಾರಣಕ್ಕೂ ಶಸ್ತ್ರಾಸ್ತ್ರಗಳನ್ನು ಕೆಳಗಿಡುವಂತ ಮಾತೇ ಇಲ್ಲ. ನಮ್ಮ ಶಸ್ತ್ರಾಸ್ತ್ರಗಳ ಮೂಲಕ, ನಾವು ನಮ್ಮ ರಾಜ್ಯವನ್ನು ರಕ್ಷಿಸುತ್ತೇವೆ” ಎಂದು ಅವರು ಘೋಷಿಸಿದ್ದಾರೆ. ಅಲ್ಲದೇ ಉಕ್ರೇನ್ ಅಧ್ಯಕ್ಷರು ಶರಣಾಗತರಾಗಿದ್ದಾರೆ ಅಥವಾ ಪಲಾಯನ ಮಾಡಿದ್ದಾರೆ ಎಂಬ ಹೇಳಿಕೆಗಳನ್ನು ಖಂಡಿಸಿದ್ದಾರೆ.
ನಾವು ನಮ್ಮ ದೇಶವನ್ನು ಏಕಾಂಗಿಯಾಗಿ ರಕ್ಷಿಸುತ್ತಿದ್ದೇವೆ. ನಿನ್ನೆಯಂತೆಯೇ, ವಿಶ್ವದ ಅತ್ಯಂತ ಶಕ್ತಿಶಾಲಿ ದೇಶವು ದೂರದಿಂದ ನೋಡಲಿ ಎಂದು ಝೆಲೆನ್ಸ್ಕಿ ಫೇಸ್ಬುಕ್ ವೀಡಿಯೊದಲ್ಲಿ ಹೇಳಿದ್ದಾರೆ ಎಂದು ಸಿಎನ್ಎನ್ ಉಲ್ಲೇಖಿಸಿದೆ.
ಯುಎನ್ ಭದ್ರತಾ ಮಂಡಳಿಯ ಕೌನ್ಸಿಲ್ ಮತದಾನದ ನಂತರ, ಅಧ್ಯಕ್ಷ ಝೆಲೆನ್ಸ್ಕಿ ಅವರು ಕರಡು ನಿರ್ಣಯದಲ್ಲಿ ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳಿಂದ "ಅಭೂತಪೂರ್ವ" ಸಹ-ಮತ ದೊರಕಿದೆ. ''ಇದರಿಂದಾಗಿ ಸಾಬೀತುಪಡಿಸುತ್ತದೆ, ಜಗತ್ತು ನಮ್ಮೊಂದಿಗಿದೆ, ಸತ್ಯವು ನಮ್ಮೊಂದಿಗಿದೆ, ಗೆಲುವು ನಮ್ಮದಾಗಿರುತ್ತದೆ" ಎಂದು ಟ್ವೀಟ್ ಮಾಡಿದ್ದಾರೆ.
ಮಿಲಿಟರಿ ಬಲಶಾಲಿಯಾದ ರಷ್ಯಾದಿಂದ ನಿರಂತರ ಆಕ್ರಮಣದ ಹೊರತಾಗಿಯೂ, ಉಕ್ರೇನಿಯನ್ ಪಡೆಗಳು ರಷ್ಯಾದ ಸೈನ್ಯವನ್ನು ವಿರೋಧಿಸುವುದನ್ನು ಮುಂದುವರೆಸಿದೆ. ಎರಡೂ ಕಡೆಗಳಲ್ಲಿ ಸಾವುನೋವುಗಳು ಹೆಚ್ಚಾಗುತ್ತಿದ್ದರೂ ಸಹ, ಝೆಲೆನ್ಸ್ಕಿ ತನ್ನ ರಾಷ್ಟ್ರದ ರಾಜಧಾನಿಯಲ್ಲಿ ದೃಢನಿಶ್ಚಯದಿಂದ ಉಳಿದುಕೊಂಡಿದ್ದಾರೆ. ಅಲ್ಲದೆ ಉಕ್ರೇನಿಯನ್ನರಿಗೆ ತಮ್ಮ ನೆಲಕ್ಕಾಗಿ ಎದ್ದು ನಿಲ್ಲುವಂತೆ ಪ್ರಚೋದಿಸಿದ್ದಾರೆ.