ಕೀವ್, ಫೆ 26 (DaijiworldNews/KP): ರಷ್ಯಾ ಮತ್ತು ಯೂಕ್ರೇನ್ ನಡುವಿನ ಯುದ್ಧ ಶನಿವಾರವೂ ಮುಂದುವರಿದಿದ್ದು, ಇ ಡೀ ಯೂಕ್ರೇನ್ ಅನ್ನು ಆಕ್ರಮಿಸಿಕೊಳ್ಳುವತ್ತ ಮುನ್ನುಗುತ್ತಿರುವ ರಷ್ಯಾ ಪಡೆಗಳು ವಸತಿ ಸಮುಚ್ಛಯಗಳ ಮೇಲೂ ಕ್ಷಿಪಣಿ ದಾಳಿ ನಡೆಸುತಿದ್ದು , ಶೇ. 81% ರಷ್ಟು ಕಟ್ಟಡಗಳು ದ್ವಂಸಗೊಂಡಿದೆ.
ಉಕ್ರೇನ್ನ ಸೇನಾನೆಲೆಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿರುವುದಾಗಿ ಹೇಳುತ್ತಾ ಬಂದಿರುವ ರಷ್ಯಾ ಇದೀಗಾ ಉಕ್ರೇನ್ನ ಪ್ರಮುಖ ನಗರಗಳಲ್ಲಿನ ವಸತಿ ಕಟ್ಟಡದ ಮೇಲು ದಾಳಿ ನಡೆಸುತ್ತಿದೆ.
ಈಗಾಗಲೇ ಉಕ್ರೇನ್ನ ರಾಜಧಾನಿ ಕೀವ್ನಲ್ಲಿ ವಸತಿ ಸಮುಚ್ಛಯಗಳ ಮೇಲೆ ರಷ್ಯಾ 2 ರಾಕೆಟ್ ದಾಳಿ ನಡೆಸಿದ್ದು, ಶೇ. 81% ರಷ್ಟು ಕಟ್ಟಡ ದ್ವಂಸಗೊಂಡಿದೆ. ಅಲ್ಲದೆ ಯುದ್ಧದಲ್ಲಿ ದಿನದಿಂದ ದಿನಕ್ಕೆ ಸಾವು ನೋವುಗಳ ಸಂಖ್ಯೆ ಹೆಚ್ಚುತ್ತಲೇ ಇದೆ.
ಒಂದು ಕ್ಷಿಪಣಿಯು ಜುಲ್ಯಾನಿ ವಿಮಾನ ನಿಲ್ದಾಣ ಸಮೀಪದ ಪ್ರದೇಶದಲ್ಲಿ ಒಂದು ಕ್ಷಿಪಣ ಸ್ಫೋಟಗೊಂಡರೆ, ಇನ್ನೊಂದು ಕ್ಷಿಪಣಿ ಸೆವಾಸ್ಟೊಪೋಲ್ ಚೌಕದ ಸಮೀಪದ ಪ್ರದೇಶವನ್ನು ಭಾಗಶಃ ಧ್ವಂಸ ಮಾಡಿದೆ.