ಉಕ್ರೇನ್, ಫೆ 27 (DaijiworldNews/HR): ಉಕ್ರೇನ್ನ ಮೇಲೆ ರಷ್ಯಾ ದೇಶ, ಯುದ್ಧ ಆರಂಭಿಸಿದಾಗಿನಿಂದ ಇಲ್ಲಿಯವರೆಗೆ ಉಕ್ರೇನ್ನ ಸುಮಾರು 1.20 ಲಕ್ಷ ಜನರು ಪಕ್ಕದ ಪೋಲೆಂಡ್ ಹಾಗೂ ಇನ್ನಿತರ ರಾಷ್ಟ್ರಗಳಿಗೆ ವಲಸೆ ಹೋಗಲಾರಂಭಿಸಿದ್ದಾರೆ ಎಂದು ತಿಳಿದು ಬಂದಿದೆ.
ಗುರುವಾರ ಹಾಗೂ ಶುಕ್ರವಾರಗಳ 48 ಗಂಟೆಗಳಲ್ಲೇ ಸುಮಾರು 50 ಸಾವಿರಕ್ಕಿಂತಲೂ ಹೆಚ್ಚು ವಲಸೆ ಹೋಗಿದ್ದಾರೆ ಎಂದು ವಿಶ್ವಸಂಸ್ಥೆಯ ನಿರಾಶ್ರಿತರ ಆಯೋಗ ತಿಳಿಸಿದೆ.
ಇನ್ನು ಉಕ್ರೇನ್ನ ನಾನಾ ಪಟ್ಟಣಗಳು, ಹಳ್ಳಿಗಳಿಂದ ಜನರು, ತಮ್ಮ ಮಕ್ಕಳು, ಸಾಮಾನು- ಸರಂಜಾಮುಗಳನ್ನು ಕಟ್ಟಿಕೊಂಡು ಗುಂಪಾಗಿ ಗಡಿಗಳತ್ತ ನಡೆದು ಹೋಗುತ್ತಿರುವ ದೃಶ್ಯಗಳು ಈಗ ಮಾಮೂಲು ಎಂಬಂತಾಗಿದೆ.
ಅದರಲ್ಲಿಯೂ ಇನ್ನೂ ಕೆಲವರು, ಕಾರು, ಬಸ್, ಟೆಂಪೋಗಳನ್ನು ಹತ್ತಿಕೊಂಡು ಗಡಿಗಳತ್ತ ಪ್ರಯಾಣ ಬೆಳೆಸುತ್ತಿರುವುದಾಗಿ ವರದಿಯಾಗಿದೆ.