ಉಕ್ರೇನ್, ಫೆ 27 (DaijiworldNews/KP): ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಘೋಷಿಸಿದ ಮಿಲಿಟರಿ ಕಾರ್ಯಾಚರಣೆಯು ನಾಲ್ಕನೇ ದಿನಕ್ಕೆ ಕಾಲಿಡುತ್ತಿದ್ದಂತೆ ಉಕ್ರೇನ್ನ ಎರಡು ನಗರಗಳನ್ನು ರಷ್ಯಾ ವಶಪಡಿಸಿಕೊಂಡಿದೆ.
ಸಾಂದರ್ಭಿಕ ಚಿತ್ರ
ರಷ್ಯಾದ ಆಕ್ರಮಣದ ವಿರುದ್ಧ ಉಕ್ರೇನ್ ಹೋರಾಟವನ್ನು ಮುಂದುವರೆಸಿದೆ. ಆದರೆ ಉಕ್ರೇನ್ನ ಎರಡನೇ ಅತಿದೊಡ್ಡ ನಗರದಲ್ಲಿ ಗ್ಯಾಸ್ ಪೈಪ್ಲೈನ್ ಅನ್ನು ಸ್ಫೋಟಿಸಿದ ನಂತರ ರಷ್ಯಾದ ಪಡೆಗಳು ಖಾರ್ಕಿವ್ ಅನ್ನು ಪ್ರವೇಶಿಸಿವೆ ಎಂದು ಉಕ್ರೇನಿಯನ್ ಸರ್ಕಾರ ಭಾನುವಾರ ಹೇಳಿದೆ.
ಅಲ್ಲದೆ ಉಕ್ರೇನ್ನ ದಕ್ಷಿಣ ಮತ್ತು ಆಗ್ನೇಯದಲ್ಲಿರುವ ಇನ್ನೂ ಎರಡು ನಗರಗಳನ್ನು ರಷ್ಯಾ ವಶಪಡಿಸಿಕೊಂಡಿದೆ.
ಇನ್ನು ಈ ಯುದ್ದದಲ್ಲಿ ಇದುವರೆಗೆ ಉಕ್ರೇನ್ನ ಸುಮಾರು 200 ನಾಗರಿಕರು ಸಾವನ್ನಪ್ಪಿದ್ದು, 150,000ಕ್ಕೂ ಹೆಚ್ಚು ಜನರು ಪೋಲೆಂಡ್, ಮೊಲ್ಡೊವಾ ಸೇರಿದಂತೆ ನೆರೆಯ ದೇಶಗಳಿಗೆ ಪಲಾಯನ ಮಾಡಿದ್ದಾರೆ.
ಇನ್ನು ಹೆರಾಶ್ಚೆಂಕೊ ಮತ್ತು ಉಕ್ರೇನ್ನ ವಿಶೇಷ ಸಂವಹನ ಮತ್ತು ಮಾಹಿತಿ ರಕ್ಷಣೆಯ ರಾಜ್ಯ ಸೇವೆ ಪೋಸ್ಟ್ ಮಾಡಿದ ವೀಡಿಯೊಗಳ ಪ್ರಕಾರ, ಹಲವಾರು ಲಘು ಮಿಲಿಟರಿ ವಾಹನಗಳು ನಗರದ ಬೀದಿಯಲ್ಲಿ ಚಲಿಸುತ್ತಿರುವುದು ಕಂಡುಬಂದಿದೆ. ಹಿಂದಿನ ದಿನ, ರಷ್ಯಾದ ಪಡೆಗಳು ಖಾರ್ಕಿವ್ನಲ್ಲಿ ಗ್ಯಾಸ್ ಪೈಪ್ಲೈನ್ ಅನ್ನು ಸ್ಫೋಟಿಸಿದವು.