ಕೀವ್, ಫೆ. 27 (DaijiworldNews/SM): ಉಕ್ರೇನ್ ಮೇಲೆ ರಷ್ಯಾ ನಿರಂತರ ದಾಳಿ ನಡೆಸುತ್ತಿರುವ ಮಧ್ಯೆಯೇ ರಷ್ಯಾದೊಂದಿಗೆ ಶಾಂತಿ ಮಾತುಕತೆಗೆ ಸಿದ್ಧ ಎಂದು ಉಕ್ರೇನ್ ಒಪ್ಪಿಕೊಂಡಿದೆ.
ಆ ಮೂಲಕ ಕದನ ವಿರಾಮದ ಬಗ್ಗೆ ಮಾತುಕತೆ ನಡೆಸಲು ನಿರಾಕರಿಸುತ್ತಿದೆ ಎಂಬ ರಷ್ಯಾದ ಆರೋಪಗಳನ್ನು ಉಕ್ರೇನ್ ತಳ್ಳಿ ಹಾಕಿದೆ. ಸ್ವೀಕಾರಾರ್ಹವಲ್ಲದ ಷರತ್ತುಗಳನ್ನು ಹೊರತುಪಡಿಸಿ ಬೇಷರತ್ ಶಾಂತಿಮಾತುಕತೆಗೆ ತಾನು ಸಿದ್ಧ ಎಂದು ಘೋಷಣೆ ಮಾಡಿದೆ.
ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಮತ್ತು ಬೆಲರೂಸಿಯನ್ ನಾಯಕ ಅಲೆಕ್ಸಾಂಡರ್ ಲುಕಾಶೆಂಕೊ ನಡುವಿನ ದೂರವಾಣಿ ಕರೆಯ ನಂತರ - ಚೆರ್ನೋಬಿಲ್ ಹೊರಗಿಡುವ ವಲಯದ ಬಳಿ - ಬೆಲಾರಸ್ನೊಂದಿಗಿನ ತನ್ನ ಗಡಿಯಲ್ಲಿ ರಷ್ಯಾದೊಂದಿಗೆ ಮಾತುಕತೆ ನಡೆಸಲು ಸಿದ್ಧ ಎಂದು ಉಕ್ರೇನ್ ಘೋಷಿಸಿದೆ.