ಮಾ 01 (DaijiworldNews/HR): ಸಾಫ್ಟ್ವೇರ್ ಸಂಸ್ಥೆ ಮೈಕ್ರೋಸಾಫ್ಟ್ ಸಿಇಒ ಸತ್ಯ ನಾಡೆಲ್ಲಾ ಅವರ ಪುತ್ರ ಝೈನ್(26) ಹುಟ್ಟಿದಾಗಿನಿಂದಲು ಸೆರೆಬ್ರಲ್ ಪಾಲ್ಸಿ ಎಂಬ ಕಾಯಿಲೆಯಿಂದ ಬಳಲುತ್ತಿದ್ದು ಸೋಮವಾರದಂದು ನಿಧನರಾಗಿದ್ದರೆಂದು ಕಂಪನಿಯು ತಿಳಿಸಿದೆ.
ಹುಟ್ಟಿದಾಗಿನಿಂದಲು ಸೆರೆಬ್ರಲ್ ಪಾಲ್ಸಿ ಎಂಬ ಕಾಯಿಲೆಯಿಂದ ಬಳಲುತ್ತಿದ್ದ ಝೈನ್ ಮೃತಪಟ್ಟಿದ್ದಾರೆ ಎಂದು ಮೈಕ್ರೋಸಾಫ್ಟ್ ಸಂಸ್ಥೆ ತಮ್ಮ ಸಿಬ್ಬಂದಿಗೆ ಇಮೇಲ್ ಮೂಲಕ ಮಾಹಿತಿ ನೀಡಿದ್ದಾರೆಂದು ತಿಳಿದು ಬಂದಿದೆ.
ಸತ್ಯ ನಾಡೆಲ್ಲಾ ಅವರು 2014ರಲ್ಲಿ ಮೈಕ್ರೋಸಾಫ್ಟ್ ಸಿಇಒ ಆಗಿ ಕಾರ್ಯನಿರ್ವಹಿಸುತ್ತಿದ್ದು, ಅಂದಿನಿಂದಲೂ ಸಾಫ್ಟ್ವೇರ್ ಬಳಸುವ ವಿಕಲಚೇತನರಿಗೆ ಉತ್ತಮ ಸೇವೆ ನೀಡಲು ಹಲವು ಉತ್ಪನ್ನಗಳನ್ನು ವಿನ್ಯಾಸಗೊಳಿಸಲು ಇಡೀ ಕಂಪನಿಯನ್ನು ಸತ್ಯ, ಕೇಂದ್ರಿಕರಿಸಿದ್ದಾರೆ.