ಕೀವ್, ಮಾ 03 (DaijiworldNews/HR): ಯುದ್ಧಗ್ರಸ್ಥ ಉಕ್ರೇನ್ನಲ್ಲಿ ನಾಗರೀಕರ ಜೀವ ಉಳಿಸಲು ಉಕ್ರೇನ್ ಸೇನೆ ರಷ್ಯಾಗೆ ಶರಣಾಗತಿಯಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿರುವುದಾಗಿ ವರದಿಯಾಗಿದೆ.
ಉಕ್ರೇನ್ ಮೇಲೆ ರಷ್ಯಾ ರಾಕೆಟ್ ಮತ್ತು ಕ್ಷಿಪಣಿ ದಾಳಿ ಮಾಡಿ ಹಲವು ಮಿಲಿಟರಿ ಕಟ್ಟಡಗಳನ್ನು ಧ್ವಂಸ ಮಾಡಿದ್ದು, ಸೈನಿಕರು ನಾಗರಿಕರ ಜೀವ ಉಳಿಸಲು ಶರಣಾಗಿದ್ದಾರೆಂದು ವರದಿಯಾಗಿದೆ.
ಇನ್ನು ಉಕ್ರೇನ್ ರಾಜಧಾನಿ ಕೀವ್ನಲ್ಲಿ ರಷ್ಯಾ ಕ್ಷಿಪಣಿ ದಾಳಿ ಮುಂದುವರೆಸಿದ್ದು, ದಕ್ಷಿಣ ರೈಲ್ವೆ ಸ್ಟೇಷನ್, ರಕ್ಷಣಾ ಸಚಿವಾಲಯದ ಬಳಿ ದಾಳಿ ಮಾಡಲಾಗಿದೆ.
ರಷ್ಯಾ ಉಕ್ರೇನ್ ಮೇಲೆ ಯುದ್ಧ ಸಾರಿಯುವ ಹಿನ್ನೆಲೆಯಲ್ಲಿ ಒರಾಕಲ್ ಕಂಪನಿ ರಷ್ಯಾದಲ್ಲಿ ತನ್ನ ಸೇವೆ ಸ್ಥಗಿತಗೊಳಿಸಿದೆ ಎಂದು ತಿಳಿದು ಬಂದಿದೆ.