ರೊಮೇನಿಯಾ, ಮಾ 03 (DaijiworldNews/HR): ಸುಮಾರು 100 ಭಾರತೀಯ ವಿದ್ಯಾರ್ಥಿಗಳನನು ಪೋಲಿಷ್ ಗಡಿ ಕಾವಲುಗಾರರು ಹೊಡೆದು ಮತ್ತೆ ಉಕ್ರೇನ್ ಗೆ ತಿರುಗಿಸಿದದು, ಅವರನ್ನ ರೊಮೇನಿಯಾದ ನಿರಾಶ್ರಿತರ ಶಿಬಿರದಲ್ಲಿ ಇರಿಸಲಾಗಿದೆ ಎಂದು ಬೆಲಾರಸ್ ರಾಯಭಾರಿ ತಿಳಿಸಿದೆ.
ವಿಶ್ವಸಂಸ್ಥೆಯ ಬೆಲಾರಸ್ ರಾಯಭಾರಿ ವ್ಯಾಲೆಂಟಿನ್ ರೈಬಕೊವ್ ಅವರು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಈ ಹೇಳಿಕೆ ನೀಡಿದ್ದಾರೆ.
ಪೋಲಿಷ್ ಗಡಿ ಕಾವಲುಗಾರರು ಫೆಬ್ರವರಿ 26ರಂದು ಸುಮಾರು 100 ಭಾರತೀಯ ವಿದ್ಯಾರ್ಥಿಗಳ ಗುಂಪನ್ನ ಹೊಡೆದು ಉಕ್ರೇನ್ʼಗೆ ಮರಳಿಸಿದದು, ಬಳಿಕ ಅವರನ್ನ ರೊಮೇನಿಯಾದ ನಿರಾಶ್ರಿತರ ಶಿಬಿರದಲ್ಲಿ ಇರಿಸಲಾಗಿತ್ತು ಎಂದು ತಿಳಿದರು.
ಇನ್ನು ವಿಶ್ವಸಂಸ್ಥೆಯ ಉಕ್ರೇನ್ ರಾಯಭಾರಿ ಸೆರ್ಗಿ ಕೈಸ್ಲಿಟ್ಸಿಯಾ ಅವರು ಮಾತನಾಡಿ, 'ತಮ್ಮ ದೇಶದಲ್ಲಿ ರಷ್ಯಾದ ಮಿಲಿಟರಿ ಕಾರ್ಯಾಚರಣೆಯಲ್ಲಿ ಒಬ್ಬ ಭಾರತೀಯ ಪ್ರಜೆಯ ಹತ್ಯೆಯಾಗಿದ್ದು, ಮತ್ತೊಬ್ಬ ಒಬ್ಬ ಚೀನೀ ನಾಗರಿಕ ಗಾಯಗೊಂಡಿದ್ದಾನೆ ಎಂದು ಹೇಳಿದರು.