ಕೈವ್, ಮಾ 03 (DaijiworldNews/MS): ರಷ್ಯಾದ ಆಕ್ರಮಣವು ಎಂಟನೇ ದಿನಕ್ಕೆ ಕಾಲಿಟ್ಟಿದ್ದು, 2,000ಕ್ಕೂ ಹೆಚ್ಚು ಉಕ್ರೇನಿಯನ್ ನಾಗರಿಕರು ಸಾವನ್ನಪ್ಪಿರಬಹುದು ಎಂಬ ವರದಿಗಳ ನಡುವೆ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರು ಉಕ್ರೇನಿಯನ್ನರು ಹೆದರುವುದಿಲ್ಲ, ಉಕ್ರೇನ್ನಿಯರನ್ನು ನಾಶಪಡಿಸಲು ಸಾಧ್ಯವಿಲ್ಲ ಮತ್ತು ಶರಣಾಗುವುದಿಲ್ಲ ಎಂದು ಗುರುವಾರ ಘೋಷಿಸಿದ್ದಾರೆ.
ಅವರು ನಮ್ಮನ್ನು ಹಲವು ಬಾರಿ ನಾಶಮಾಡಲು ಬಯಸಿದ್ದರು. ಅವರಿಗೆ ಸಾಧ್ಯವಾಗಲಿಲ್ಲ. ನಾವು ತುಂಬಾ ಅನುಭವಿಸಿದ್ದೇವೆ! ಮತ್ತು ಇದೆಲ್ಲವನ್ನೂ ಜಯಿಸಿದ ನಂತರ, ಉಕ್ರೇನಿಯನ್ನರು ಭಯಭೀತರಾಗುತ್ತಾರೆ, ಕುಸಿದುಹೋಗುತ್ತಾರೆ ಅಥವಾ ಶರಣಾಗುತ್ತಾರೆ ಎಂದು ಯಾರಾದರೂ ಭಾವಿಸಿದರೆ, ಅವರಿಗೆ ಉಕ್ರೇನ್ ಬಗ್ಗೆ ಏನೂ ತಿಳಿದಿಲ್ಲ ಎಂಬರ್ಥ ಎಂದು ಝೆಲೆನ್ಸ್ಕಿಹೇಳಿದ್ದಾರೆ.
ನಿಮಗೆ ಉಕ್ರೇನ್ನಲ್ಲಿ ಯಾವುದೇ ಸಂಬಂಧವಿಲ್ಲ, ಮನೆಗೆ ಹೋಗಿ . ರಷ್ಯನ್ ಮಾತನಾಡುವ ಜನರನ್ನು ರಕ್ಷಿಸಿ, ಎಂದು ಅವರು ತಮ್ಮ ಟೆಲಿಗ್ರಾಮ್ ಚಾನೆಲ್ನಲ್ಲಿ ಹೇಳಿದ್ದಾರೆ.
ಉಕ್ರೇನ್ ವಿದೇಶಾಂಗ ಸಚಿವ ಡಿಮಿಟ್ರೋ ಕುಲೆಬಾ ಅವರು ಬುಧವಾರದಿಂದ ಎನರ್ಗೋಡರ್ ನಲ್ಲಿ ನಡೆಯುತ್ತಿರುವ ಸಾಮೂಹಿಕ ಪ್ರತಿರೋಧದಲ್ಲಿ 'ಇದು ಉಕ್ರೇನ್ಗಾಗಿ ನಿಜವಾದ ಪೀಪಲ್ಸ್ ವಾರ್ ಪುಟಿನ್ ಗೆ ಅದನ್ನು ಗೆಲ್ಲುವ ಯಾವುದೇ ಅವಕಾಶವಿಲ್ಲ. ನಾಗರಿಕರು ನಿನ್ನೆ ಎನರ್ಗೋಡರ್ನಲ್ಲಿ ರಷ್ಯಾದ ಆಕ್ರಮಣಕಾರರನ್ನು ನಿರ್ಬಂಧಿಸಿದ್ದಾರೆ ಇಂತಹ ಸಾವಿರಾರು ಉದಾಹರಣೆ ನಮ್ಮ ಮುಂದಿದೆ ಎಂದು ತಿಳಿಸಿದ್ದಾರೆ.