ಉಕ್ರೇನ್, ಮಾ 04 (DaijiworldNews/HR): ರಷ್ಯಾ ಮತ್ತು ಉಕ್ರೇನ್ ಯುದ್ಧದ ಎಂಟು ದಿನಗಳಲ್ಲಿ 9,200ಕ್ಕೂ ಹೆಚ್ಚು ರಷ್ಯನ್ ಸೈನಿಕರು ಹತ್ಯೆ ಮಾಡಲಾಗಿದೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮೈರ್ ಝೆಲೆನ್ಸ್ಕಿ ಹೇಳಿದ್ದಾರೆ.
ಉಕ್ರೇನ್ ಮೇಲೆ ರಷ್ಯಾದ ಆಕ್ರಮಣದ ಬಗ್ಗೆ ಚರ್ಚಿಸಲು ನ್ಯಾಟೋ ವಿದೇಶಾಂಗ ಸಚಿವರು ಶುಕ್ರವಾರ ಬ್ರಸೆಲ್ಸ್ʼನಲ್ಲಿ ಸಭೆ ಸೇರಿದ್ದು, ಈ ವೇಳೆ ಎಂಟು ದಿನಗಳಲ್ಲಿ 9,200ಕ್ಕೂ ಹೆಚ್ಚು ರಷ್ಯನ್ ಸೈನಿಕರು ಹತ್ಯೆ ಮಾಡಲಾಗಿದೆ ಎಂದು ಝೆಲೆನ್ಸ್ಕಿ ತಿಳಿಸಿದ್ದಾರೆ.
ಇನ್ನು ಉಕ್ರೇನ್ ಅಧ್ಯಕ್ಷ ವೊಲೊಡಿಮೈರ್ ಝೆಲೆನ್ಸ್ಕಿ ಒಂದು ವಾರದ ಹಿಂದೆ ಮಾಸ್ಕೋದ ಆಕ್ರಮಣದ ನಂತರ ನಿರಂತರವಾಗಿ ಹಾರಾಟ ನಿಷೇಧ ವಲಯಕ್ಕೆ ಕರೆ ನೀಡಿದ್ದಾರೆ.