ಕೀವ್, ಮಾ 05 (DaijiworldNews/MS): ರಷ್ಯಾದ ಬಾಂಬ್ ದಾಳಿಯನ್ನು ತಡೆಯುವ ನಿಟ್ಟಿನಲ್ಲಿ "ನೊ-ಫ್ಲೈ ವಲಯ" ವನ್ನು( ಯುದ್ಧ ವಿಮಾನ ಹಾರಾಟ ನಿಷೇಧ ವಲಯ) ವಿಧಿಸಲು ಉಕ್ರೇನ್ನಿಂದ ಮಾಡಿದ ಮನವಿಯನ್ನು ನ್ಯಾಟೋ ಶುಕ್ರವಾರ ತಿರಸ್ಕರಿಸಿದೆ. ಆದರೆ ಪಾಶ್ಚಿಮಾತ್ಯ ಮಿತ್ರರಾಷ್ಟ್ರಗಳು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಉಕ್ರೇನ್ ಮೇಲೆ ಸಾರಿರುವ ಯುದ್ಧವನ್ನು ನಿಲ್ಲಿಸದಿದ್ದರೆ ಹೊಸ ನಿರ್ಬಂಧಗಳನ್ನು ಎಚ್ಚರಿಸಿದ್ದಾರೆ.
ಆದರೆ ನ್ಯಾಟೊ ನಿಲುವಿನ ಬಗ್ಗೆ ತೀವ್ರ ಅಸಮಾಧಾನ ಹಾಗೂ ಖಂಡಿನೆಯನ್ನು ವ್ಯಕ್ತಪಡಿಸಿರುವ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ, ಉಕ್ರೇನ್ ನಗರಗಳಲ್ಲಿ ರಷ್ಯಾ ಮತ್ತಷ್ಟು ಬಾಂಬ್ ದಾಳಿ ನಡೆಸಲು ನ್ಯಾಟೊ ಹಸಿರು ನಿಶಾನೆ ತೋರಿದೆ ಎಂದು ಆರೋಪಿಸಿದ್ದಾರೆ.
ಮತ್ತಷ್ಟು ದಾಳಿ ಹಾಗೂ ಸಾವು-ನೋವನ್ನು ತಪ್ಪಿಸಲಾಗದು ಎಂದು ಅರಿತುಕೊಂಡಿರುವ ನ್ಯಾಟೊ, ಉದ್ದೇಶಪೂರ್ವಕವಾಗಿ ವಾಯುಪ್ರದೇಶವನ್ನು ಮುಚ್ಚದಿರಲು ನಿರ್ಧರಿಸಿದೆ ಎಂದು ವಿಡಿಯೊ ಸಂದೇಶದಲ್ಲಿ ಝೆಲೆನ್ಸ್ಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಷ್ಯಾ ಮಿಲಿಟರಿಯೂ ಉಕ್ರೇನ್ ನ ಪ್ರಮುಖ ನಗರಗಳನ್ನು ಸುತ್ತುವರೆದಿರುವಾಗ ರಷ್ಯಾದ ಜೆಟ್ಗಳು ತಮ್ಮ ದೇಶದ ಮೇಲೆ ಬಾಂಬ್ಗಳ ಮಳೆಗರೆಯುವುದನ್ನು ನಿಲ್ಲಿಸಲು ಸಹಾಯ ಮಾಡಲು ಉಕ್ರೇನ್ನ ನಾಯಕತ್ವವು ಪಾಶ್ಚಿಮಾತ್ಯ ಮಿತ್ರರಾಷ್ಟ್ರಗಳು ಹತಾಶವಾಗಿ ಮನವಿ ಮಾಡಿದೆ.
"ತುಂಬಾ ತಡವಾಗುವ ಮೊದಲು ಈಗಲೇ ಕಾರ್ಯನಿರ್ವಹಿಸಿ. ಪುಟಿನ್ ಉಕ್ರೇನ್ ಅನ್ನು ಸಿರಿಯಾವಾಗಿ ಪರಿವರ್ತಿಸಲು ಬಿಡಬೇಡಿ" ಎಂದು ಡಿಮಿಟ್ರೋ ಕುಲೆಬಾ ಅವರು ಹೇಳಿದ್ದರು
ಆದರೆ NATO ಮುಖ್ಯಸ್ಥ ಜೆನ್ಸ್ ಸ್ಟೋಲ್ಟೆನ್ಬರ್ಗ್, ಮಾಸ್ಕೋದೊಂದಿಗಿನ ನೇರ ಘರ್ಷಣೆಯ ಭಯದ ಮೇಲೆ ಮೈತ್ರಿಯು ಸಂಘರ್ಷದಲ್ಲಿ ಮಧ್ಯಪ್ರವೇಶಿಸುವುದಿಲ್ಲ, ಅದು ಪರಮಾಣು ಯುದ್ಧಕ್ಕೆ ತಿರುಗಬಹುದು ಎಂದು ಹೇಳಿದರು.
ಉಕ್ರೇನ್ನಲ್ಲಿ ವಿಮಾನ ಹಾರಾಟವನ್ನು ನಿಷೇಧಿಸುವುದರಿಂದ ರಷ್ಯಾದ ನೇರ ಆಕ್ರಮಣವನ್ನು ಪ್ರಚೋದಿಸಲಿದೆ ಎಂದು ನ್ಯಾಟೊ ಆತಂಕಪಟ್ಟುಕೊಳ್ಳುತ್ತಿದೆ. ಈ ಸಾವಿಗೆ ನ್ಯಾಟೊ ಕೂಡ ಹೊಣೆಯಾಗಲಿದೆ ಎಂದು ಹೇಳಿದರು.