ಕೀವ್, ಮಾ 05 (DaijiworldNews/DB): ಕಳೆದ ಎರಡು ದಿನಗಳ ಹಿಂದಷ್ಟೇ ರಷ್ಯಾ ಸೇನೆ ವಶಪಡಿಸಿಕೊಂಡಿದ್ದ ಉಕ್ರೇನ್ ನಲ್ಲಿರುವ ಯೂರೋಪ್ ನ ಅತಿದೊಡ್ಡ ಪರಮಾಣು ಸ್ಥಾವರ ಝಪೋರಿಝಿಯಾವನ್ನು ಉಕ್ರೇನ್ ಮತ್ತೆ ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿದೆ.
ಈ ಪರಮಾಣು ಸ್ಥಾವರದ ಮೇಲೆ ರಷ್ಯಾ ಗುರುವಾರ ದಾಳಿ ನಡೆಸಿ ತನ್ನ ವಶಕ್ಕೆ ಪಡೆದುಕೊಂಡಿತ್ತು. ಆದರೆ ಇದೀಗ ಉಕ್ರೇನ್ ಸೇನೆ ಸ್ಥಾವರದ ಮೇಲೆ ತನ್ನ ನಿಯಂತ್ರಣ ಸಾಧಿಸಿದೆ ಎಂಬುದಾಗಿ ತಿಳಿದು ಬಂದಿದೆ.
ಸ್ಥಾವರದಲ್ಲಿ ನಡೆದ ಸ್ಪೋಟದಲ್ಲಿ ಉಕ್ರೇನ್ ನ ಮೂವರು ಸೈನಿಕರು ಮೃತಪಟ್ಟು ಹಲವರು ಗಾಯಗೊಂಡಿದ್ದರು. ಘಟನೆ ಬೆನ್ನಲ್ಲೇ ನ್ಯಾಟೋ ವಿದೇಶಾಂಗ ಸಚಿವರು ತುರ್ತು ಸಭೆ ನಡೆಸಿದ್ದಾರೆ. ಸ್ಥಾವರದಲ್ಲಿ ವಿಕಿರಣ ಸೋರಿಕೆಯಾಗಿಲ್ಲ ಎಂದು ವಿಶ್ವಸಂಸ್ಥೆಯ ಪರಮಾಣು ನಿಗಾ ಸಂಸ್ಥೆ ಸ್ಪಷ್ಟಪಡಿಸಿದೆ.
ಕೀವ್ ಹೊರಗಿರುವ ಇರ್ಪಿನ್ ಪಟ್ಟಣದಲ್ಲಿರುವ ಮಿಲಿಟರಿ ಆಸ್ಪತ್ರೆಯೊಂದಕ್ಕೆ ರಷ್ಯಾ ಪಡೆಗಳು ದಾಳಿ ನಡೆಸಿವೆ.