ಕೀವ್, ಮಾ 06 (DaijiworldNews/DB): ಉಕ್ರೇನ್ ನ ಎರಡು ಪರಮಾಣು ಸ್ಥಾವರಗಳನ್ನುಈಗಾಗಲೇ ವಶಪಡಿಸಿಕೊಂಡಿರುವ ರಷ್ಯಾದ ಪಡೆಗಳು ಇನ್ನೊಂದು ಅಣುಸ್ಥಾವರ ವಶಕ್ಕೆ ಮುಂದಾಗಿದೆ ಎಂದು ಉಕ್ರೇನ್ ಅಧ್ಯಕ್ಷರು ಅಮೆರಿಕಾದ ಸೆನೆಟರ್ಗಳಿಗೆ ಶನಿವಾರ ತಿಳಿಸಿರುವುದಾಗಿ ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.
ರಷ್ಯಾ ಈ ಹಿಂದೆ ವಷಶಪಡಿಸಿಕೊಂಡ ಯುಝ್ನೋಕ್ರೈನ್ಸ್ಕ್ ದಿಂದ ಕೇವಲ 20 ಕಿ.ಮೀ ದೂರದ ಈ ಅಣು ಸ್ಥಾವರ ಇದೆ. ಈ ಅಣುಸ್ಥಾವರವನ್ನು ರಷ್ಯಾ ಸೈನಿಕರು ಈಗಾಗಲೆ ಸುತ್ತುವರೆದಿವೆ ಎಂದವರು ಮಾಹಿತಿ ನೀಡಿದ್ದಾರೆ.
ರಷ್ಯಾ ವಶಪಡಿಸಿಕೊಂಡಿದ್ದ ಜಪೋರಿಝಿಯಾ ಪರಮಾಣು ಸ್ಥಾವರವು ಪ್ರಸ್ತುತ ಉಕ್ರೇನ್ ನಿಯಂತ್ರಣದಲ್ಲಿದೆ. ಇದೀಗ ಚೆರ್ನೋಬಿಲ್ ಅಣುಸ್ಥಾವರದೆಡೆಗೆ ರಷ್ಯಾ ಪಡೆಗಳ ಕಣ್ಣು ನೆಟ್ಟಿದೆ ಎಂಬುದಾಗಿ ಮಾಹಿತಿ ಲಭ್ಯವಾಗಿದೆ. ಉಕ್ರೇನ್ ನಲ್ಲಿ 4 ಅಣು ಸ್ಥಾವರನಗಳಿದ್ದು, 15 ರಿಯಾಕ್ಟರ್ ಗಳಿವೆ.
ಕದನ ವಿರಾಮ ಉಲ್ಲಂಘಿಸಿದ ರಷ್ಯಾ
ಉಕ್ರೇನ್ ಮೇಲೆ ನಡೆಸುತ್ತಿದ್ದ ಯುದ್ಧಕ್ಕೆ ಶನಿವಾರ ತಾತ್ಕಾಲಿಕ ಕದನ ವಿರಾಮ ಘೋಷಿಸಿದ್ದ ರಷ್ಯಾ, ಘೋಷಣೆ ಹೊರಡಿಸಿದ ಕೆಲವೇ ಗಂಟೆಗಳಲ್ಲಿ ಉಕ್ರೇನ್ನ ಹಲವು ನಗರಗಳಲ್ಲಿ ಶೆಲ್ ದಾಳಿ ನಡೆಸುವ ಮೂಲಕ ಕದನ ವಿರಾಮ ಉಲ್ಲಂಘನೆ ಮಾಡಿರುವುದಾಗಿ ವರದಿಗಳು ತಿಳಿಸಿವೆ.
ರಷ್ಯಾದ ಈ ನಡೆಯಿಂದಾಗಿ ಮರಿಪೋಲ್ನಿಂದ ನಾಗರಿಕರ ಸ್ಥಳಾಂತರಿಸುವಿಕೆಯನ್ನು ಮತ್ತೆ ಸ್ಥಗಿತಗೊಳಿಸಲಾಯಿತು. ’ಮರಿಪೋಲ್ ಮತ್ತು ಅದರ ಸುತ್ತಮುತ್ತಲಿನ ಪ್ರದೇಶದ ಮೇಲೆ ಗುಂಡಿನ ದಾಳಿಯನ್ನು ರಷ್ಯಾ ಮುಂದುವರೆಸಿದೆ” ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರ ಕಚೇರಿಯ ಉಪ ಮುಖ್ಯಸ್ಥ ಕೈರಿಲೊ ಟಿಮೊಶೆಂಕೊ ಮಾಧ್ಯಮಗಳಿಗೆ ತಿಳಿಸಿದ್ದಾರೆ.