ಅಫ್ಘಾನಿಸ್ತಾನ, ಮಾ 07 (DaijiworldNews/HR): ಭಾರೀ ಸ್ಫೋಟ ಸಂಭವಿಸಿ ಆರು ವರ್ಷದ ಮಗು ಗಾಯಗೊಂಡಿರುವ ಘಟನೆ ಉರುಜ್ಗಾನ್ ಪ್ರಾಂತ್ಯದ ತಿರಿಂಕೋಟ್ ಪ್ರದೇಶದಲ್ಲಿ ನಡೆದಿದೆ.
ಸಾಂದರ್ಭಿಕ ಚಿತ್ರ
ರಾಜಧಾನಿ ತಿರಿಂಕೋಟ್ನ ಅಂಗಡಿಯೊಂದರಲ್ಲಿ ಈ ಘಟನೆ ನಡೆದಿದ್ದು, ಘಟನೆಯಲ್ಲಿ ಆರು ವರ್ಷದ ಬಾಲಕಿ ಗಾಯಗೊಂಡಿದ್ದಾಳೆ ಎಂದು ಉರುಜ್ಗಾನ್ ಗವರ್ನರ್ ಕಚೇರಿಯ ವಕ್ತಾರ ಖಾರಿ ಮಹಮೂದ್ ಮುದಾಸ್ಸರ್ ತಿಳಿಸಿದ್ದಾರೆ.
ಇನ್ನು ಈ ಸ್ಫೋಟಕ್ಕೆ ಕಾರಣ ತಿಳಿದು ಬಂದಿಲ್ಲ ಈ ಬಗ್ಗೆ ಭದ್ರತಾ ಪಡೆಗಳು ತನಿಖೆ ನಡೆಸುತ್ತಿದೆ ಎಂದು ಮುದಸ್ಸರ್ ಹೇಳಿದರು.
ಕಳೆದ ತಿಂಗಳು ಅಫ್ಘಾನಿಸ್ತಾನದ ಕುಂದುಜ್ ಪ್ರಾಂತ್ಯದ ಖಾನಾಬಾದ್ ಜಿಲ್ಲೆಯಲ್ಲಿ ಸ್ಫೋಟ ಸಂಭವಿಸಿ ಇಬ್ಬರು ಮಕ್ಕಳು ಸಾವನ್ನಪ್ಪಿ, ಇಬ್ಬರು ಗಾಯಗೊಂಡಿದ್ದರು.