ಕೀವ್, ಮಾ 07 (DaijiworldNews/HR): ಯುದ್ದಗ್ರಸ್ಥ ಉಕ್ರೇನ್ನಲ್ಲಿ ರಷ್ಯಾ ಸೇನೆ ಕ್ಷಿಪಣಿ ದಾಳಿ ಮುಂದುವರೆಸಿದ್ದು, ರಷ್ಯಾದ ಎರಡು ಯುದ್ಧವಿಮಾನಗಳನ್ನು ಉಕ್ರೇನ್ ಸೇನೆ ಹೊಡೆದುರುಳಿಸಿದೆ ಎಂದು ತಿಳಿದು ಬಂದಿದೆ.
ರಷ್ಯಾದ ಎರಡು ಫೈಟರ್ ಜಟ್ ಗಳನ್ನು ರಾಕೆಟ್ ಲಾಂಚರ್ ಮೂಲಕ ಧ್ವಂಸಗೊಳಿಸಲಾಗಿದ್ದು, ಓರ್ವ ಪೈಲಟ್ ಸಾವನ್ನಪ್ಪಿದ್ದಾರೆ ಎಂದು ಉಕ್ರೇನ್ ತಿಳಿಸಿದೆ.
ಇನ್ನು ಉಕ್ರೇನ್ ಹಾಗೂ ರಷ್ಯಾ ಮಧ್ಯೆ ಎರಡು ಶಾಂತಿ ಸಭೆಗಳು ವಿಫಲವಾಗಿರುವ ಬೆನ್ನಲ್ಲೇ ಇಂದು ಉಭಯ ದೇಶಗಳ ನಡುವೆ ಮೂರನೇ ಸುತ್ತಿನ ಮಾತುಕತೆ ನಡೆಯಲಿದೆ.