ವಾಷಿಂಗ್ಟನ್, ಮಾ 07 (DaijiworldNews/MS): ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ರಷ್ಯಾ ಬಾಹ್ಯಾಕಾಶ ಸಂಸ್ಥೆ ರಾಸ್ಕೊಸ್ಮಸ್ ತಾನು ಹೊಂದಿದ್ದ ವಿಭಾಗವನ್ನು ಬೇರ್ಪಡಿಸುವ ವಿಡಿಯೋ ಹೊರಬಿದ್ದಿದೆ.
ರಷ್ಯಾದ ಗಗನಯಾತ್ರಿಗಳು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ಸಂಪರ್ಕ ಕಡಿತಗೊಳಿಸುವುದನ್ನು ವೀಡಿಯೊ ತೋರಿಸುತ್ತದೆ.
ಬಾಹ್ಯಾಕಾಶದ ಉಗಮ, ಅದರಲ್ಲಿನ ಚಟುವಟಿಕೆಗಳು ಹಾಗೂ ಹೊಸ ಆವಿಷ್ಕಾರಗಳನ್ನು ನಡೆಸಲು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವನ್ನು ಬಹುರಾಷ್ಟ್ರಗಳ ಮೈತ್ರಿ ಯಿಂದ ನಿರ್ಮಿಸಲಾಗಿದೆ.
ಉಕ್ರೇನ್ ಮೇಲೆ ರಷ್ಯಾ ದಾಳಿ ನಡೆಸಿದ ಬೆನ್ನಲ್ಲೇ ಅಮೆರಿಕ, ರಷ್ಯಾದ ಮೇಲೆ ಹಲವಾರು ದಿಗ್ಬಂಧನಗಳನ್ನು ಹೇರಿದ್ದವು. ಇದರಿಂದ ಸಿಟ್ಟಿಗೆದ್ದಿದ್ದ ರಷ್ಯಾ, ಐಎಸ್ಎಸ್ ಅನ್ನು ಅಮೆರಿಕ ಅಥವಾ ಇನ್ನಿತರ ರಾಷ್ಟ್ರಗಳ ಮೇಲೆ ಕಳಚಿ ಬೀಳುವಂತೆ ಮಾಡುವುದಾಗಿ ಅಮೆರಿಕವನ್ನು ಹೆದರಿಸಿತ್ತು.ಇದು ಕೇವಲ ಬೆದರಿಕೆ ಯೆಂದು ಅಮೆರಿಕ ಹಾಗೂ ಐರೋಪ್ಯ ರಾಷ್ಟ್ರಗಳು ತಿಳಿದುಕೊಂಡಿದ್ದವು. ಆದರೆ, ರಷ್ಯಾ ಹಠಾತ್ತಾಗಿ ಐಎಸ್ಎಸ್ನಿಂದ ಬೇರ್ಪಟ್ಟಿರುವುದು ವಿಡಿಯೋ ಹೊರಬಿದ್ದಿರುವುದು ಹಲವಾರು ಆತಂಕಗಳನ್ನು ಹುಟ್ಟುಹಾಕಿದೆ. ಆದರೆ ನೈಜವಾಗಿ ಬೇರ್ಪಟ್ಟಿದೆಯೊ ಅಥವಾ ಇದು ಕೇವಲ ಪ್ರಚಾರದ ವಿಡಿಯೋ ಮಾತ್ರವೇ ಎನ್ನುವುದು ಸ್ಪಷ್ಟವಾಗಿಲ್ಲ
ಬಾಹ್ಯಾಕಾಶ ನಿಲ್ದಾಣದಿಂದ ಸಂಪರ್ಕ ಕಡಿತಗೊಂಡಂತೆ ಕಾಣುವ ವೀಡಿಯೊವನ್ನು ರಷ್ಯಾ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದೆ. ಅಮೆರಿಕ ನಿರ್ಬಂಧಗಳನ್ನು ಹೇರಿದ ಕೆಲವೇ ದಿನಗಳಲ್ಲಿ ಈ ವಿಡಿಯೋ ಬಿಡುಗಡೆಯಾಗಿದೆ.