ಕೀವ್ , ಮಾ 08 (DaijiworldNews/MS): ಉಕ್ರೇನ್ ಮೇಲೆ ರಷ್ಯಾ ಸಮರ ಸಾರಿ 12 ದಿನಗಳು ಕಳೆದಿವೆ . ನಿರಂತರ ದಾಳಿಯಿಂದ ಉಕ್ರೇನ್ನ ಹಲವು ನಗರಗಳು ಹೊತ್ತಿ ಉರಿದಿವೆ.
ಇದರ ನಡುವೆ , ಉಕ್ರೇನ್ನ ವಿದೇಶಾಂಗ ಸಚಿವ ಡಿಮಿಟ್ರೋ ಕುಲೆಬಾ ಅವರು , ಚೆರ್ನಿಹಿವ್ನ ವಸತಿ ಕಟ್ಟಡದ ಮೇಲೆ ಬಿದ್ದ ಸ್ಫೋಟಿಸದ ರಷ್ಯಾ ಹಾಕಿರುವ ಶೆಲ್ನ ಫೋಟೋವನ್ನು ಹಂಚಿಕೊಳ್ಳುವ ಮೂಲಕ ಉಕ್ರೇನಿಯನ್ ವಾಯುಪ್ರದೇಶದ ಮೇಲೆ ಹಾರಾಟ-ನಿಷೇಧ ವಲಯವನ್ನು ಘೋಷಿಸುವಂತೆ ನ್ಯಾಟೋಗೆ ಒತ್ತಾಯಿಸಿದ್ದಾರೆ.
"ಅದೃಷ್ಟಕ್ಕೆ ಈ 500 ಕೆಜಿಯ ಬಾಂಬ್ ಸ್ಫೋಟಗೊಳ್ಳದೇ ಉಳಿಯಿತು. ಆದರೆ, ಇನ್ನು ಎಷ್ಟೋ ಬಾಂಬುಗಳು ಸ್ಫೋಟಗೊಂಡು, ಮಕ್ಕಳು, ಮಹಿಳೆಯರು ಸೇರಿ ಹಲವು ಅಮಾಯಕರನ್ನು ಬಲಿಪಡೆದು ಕೊಂಡಿವೆ" ಎಂದು ಬರೆದಿದ್ದಾರೆ.
"ರಷ್ಯಾದ ಅನಾಗರಿಕ ಆಕ್ರಮಣದಿಂದ ನಮ್ಮ ಜನರನ್ನು ರಕ್ಷಿಸಲು ನಮಗೆ ಸಹಾಯ ಮಾಡಿ! ವಿಮಾನಗಳ ಹಾರಾಟ ನಿರ್ಬಂಧಿಸಿ , ವಾಯುಪ್ರದೇಶ ಮುಚ್ಚಲು ನಮಗೆ ಸಹಾಯ ಮಾಡಿ. ನಮಗೆ ಯುದ್ಧ ವಿಮಾನವನ್ನು ಒದಗಿಸಿ" ಎಂದು ಕುಲೇಬಾ ಮನವಿ ಮಾಡಿದ್ದಾರೆ.