ಕೀವ್, ಮಾ 08 (DaijiworldNews/HR): ಉಕ್ರೇನ್ ಅಧ್ಯಕ್ಷ ವೊಲೊಡೊಮೀರ್ ಝೆಲೆನ್ಸ್ಕಿ ಅವರು ಉಕ್ರೇನ್ನಿಂದ ನಾಪತ್ತೆಯಾಗಿದ್ದಾರೆ ಎಂಬ ರಷ್ಯಾ ಆರೋಪಕ್ಕೆ ತಿರುಗೇಟು ನೀಡಿರುವ ಝೆಲೆನ್ಸ್ಕಿ, ನಾನು ಎಲ್ಲಿಯೂ ನಾಪತ್ತೆಯಾಗಿಲ್ಲ ದೇಶ ತೊರೆಯುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದಾರೆ.
ಈ ಕುರಿತು ವಿಡಿಯೋವೊಂದನ್ನು ಬಿಡುಗಡೆ ಮಾಡಿರುವ ಝೆಲೆನ್ಸ್ಕಿ, ನಾನು ನಾಪತ್ತೆಯಾಗಿಲ್ಲ, ಕೀವ್ನಲ್ಲಿಯೇ ಇದ್ದೇನೆ. ದೇಶ ತೊರೆಯುವ ಪ್ರಶ್ನೆಯೂ ಇಲ್ಲ. ನಿರಂತರವಾಗಿ ನಮ್ಮ ಹೋರಾಟ ಮುಂದುವರೆಯಲಿದೆ ಎಂದಿದ್ದಾರೆ.
ಇನ್ನು ಇದೇ ವೇಳೆ ಉಕ್ರೇನ್ ಸೈನಿಕರಿಗೆ ಸಾವಿರ ಡಾಲರ್ ವೇತನವನ್ನು ಉಕ್ರೇನ್ ಸರ್ಕಾರ ಹೆಚ್ಚಿಸಿದ್ದು, ವಿಶ್ವ ಬ್ಯಾಂಕ್ ಅಗತ್ಯ ಸೇವೆಗಳಿಗಾಗಿ ಉಕ್ರೇನ್ ಗೆ 700 ಮಿಲಿಯನ್ ಡಾಲರ್ ನೆರವು ಘೋಷಿಸಿದೆ.