ಕೀವ್, ಮಾ 09 (DaijiworldNews/MS): ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರು, ಇನ್ಮುಂದೆ ನಮ್ಮ ದೇಶ "ನ್ಯಾಟೋ ಸದಸ್ಯತ್ವ" ಕ್ಕೆ ಒತ್ತಾಯಿಸುವುದಿಲ್ಲ ಎಂದು ಹೇಳಿದ್ದಾರೆ.
ಉಕ್ರೇನ್ "ಮಂಡಿಯೂರಿ ಬೇಡಿಕೊಳ್ಳುವ ದೇಶ" ಆಗಲು ಬಯಸುವುದಿಲ್ಲ ಮತ್ತು ಆ ರೀತಿ ಬೇಡಿಕೊಳ್ಳುವ ಅಧ್ಯಕ್ಷರಾಗಲು ನಾನು ಬಯಸುವುದಿಲ್ಲ" ಎಂದು ಝೆಲೆನ್ಸ್ಕಿ ಸ್ಪಷ್ಟಪಡಿಸಿದ್ದಾರೆ.
ರಷ್ಯಾ ಮತ್ತು ಉಕ್ರೇನ್ ನಡುವೆ ನಡೆಯುತ್ತಿರುವ ಯುದ್ಧದ 14 ನೇ ದಿನಕ್ಕೆ ಕಾಲಿಟ್ಟಿದೆ. ಉಕ್ರೇನ್ ಮೇಲೆ ರಷ್ಯಾ ಆಕ್ರಮಣ ನಡೆಸಲು, ನ್ಯಾಟೋ ಸದಸ್ಯತ್ವಕ್ಕೆ ನೆರೆ ರಾಷ್ಟ್ರ ಪ್ರಯತ್ನಿಸುತ್ತಿರುವುದು ಕೂಡಾ ಒಂದು ಕಾರಣವಾಗಿತ್ತು. ರಷ್ಯಾ ಜತೆ ಮಾತುಕತೆಗೆ ಸಿದ್ಧ ಎಂದೂ ಉಕ್ರೇನ್ ಅಧ್ಯಕ್ಷರು ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದಾರೆ.
ಉಕ್ರೇನ್ನ ಪ್ರಸ್ತಾವಿತ NATO ಸದಸ್ಯತ್ವದ ಕಲ್ಪನೆಗೆ ರಷ್ಯಾ ಬಹಳ ಹಿಂದಿನಿಂದಲೂ ವಿರುದ್ಧವಾಗಿದೆ. ಉತ್ತರ ಅಟ್ಲಾಂಟಿಕ್ ಟ್ರೀಟಿ ಆರ್ಗನೈಸೇಶನ್ ಅಥವಾ NATO ಯುರೋಪ್ ನಲ್ಲಿ ಹಿಂದಿನ ಸೋವಿಯತ್ ಒಕ್ಕೂಟದ ಪ್ರಾಬಲ್ಯವನ್ನು ಪರಿಶೀಲಿಸುವ ಸಲುವಾಗಿ ಶೀತಲ ಸಮರದ ಕಾಲದಲ್ಲಿ ರಚಿಸಲಾಯಿತು.