ಕೀವ್, ಮಾ 11(DaijiworldNews/MS): ಉಕ್ರೇನ್ ನಲ್ಲಿರುವ ಮಕ್ಕಳ ಮತ್ತು ಹೆರಿಗೆ ಆಸ್ಪತ್ರೆ ಮೇಲೆ ಬುಧವಾರ ರಷ್ಯಾ ನಡೆಸಿರುವ ವೈಮಾನಿಕ ದಾಳಿ ವಿರುದ್ದ ವಿಶ್ವದೆಲ್ಲೆಡೆ ವ್ಯಾಪಕ ಖಂಡನೆ ವ್ಯಕ್ತವಾಗಿದ್ದರೂ, ರಷ್ಯಾ ಶುಕ್ರವಾರವೂ ಆಸ್ಪತ್ರೆಯನ್ನು ಗುರಿಯಾಗಿಸಿ ಬಾಂಬ್ ದಾಳಿ ನಡೆಸಿದೆ.
ಇಝಿಯಂ ಪಟ್ಟಣದಲ್ಲಿರುವ ಮನೋವೈದ್ಯಕೀಯ ಆಸ್ಪತ್ರೆಯನ್ನು ಗುರಿಯಾಗಿಸಿ ರಷ್ಯಾ ಪಡೆಗಳು ಹಲವರ ಸಾವಿಗೆ ಕಾರಣವಾಗಿವೆ.
ಈ ಆಸ್ಪತ್ರೆಯಲ್ಲಿ ಒಟ್ಟು 330 ಜನರಿದ್ದರು. ಹಲವರು ಗಾಲಿಕುರ್ಚಿಯಲ್ಲಿದ್ದ ರೋಗಿಗಳಾಗಿದ್ದರು. ಗಾಯಗೊಂಡಿರುವ 73 ಜನರನ್ನು ಅಲ್ಲಿಂದ ಸ್ಥಳಾಂತರಿಸಲಾಗಿದೆ ಎಂದು ಹಾರ್ಕಿವ್ ಪ್ರದೇಶದ ಗವರ್ನರ್ ಓಲೆಹ್ ಸಿನೆಗುಬೊವ್ ಹೇಳಿದ್ದಾರೆ.
ದಾಳಿಯಲ್ಲಿ ಹಲವರು ಸಾವಿಗೀಡಾಗಿದ್ದು, ಈ ಕುರಿತ ಮಾಹಿತಿ ಇನ್ನಷ್ಟೇ ಬರಬೇಕಿದೆ. ಇದು 'ನಾಗರಿಕರ ಮೇಲೆ ನಡೆದ ಕ್ರೂರ ದಾಳಿಇಉಕ್ರೇನಿಯನ್ ರಾಷ್ಟ್ರದ ವಿರುದ್ಧ ನಡೆಸುತ್ತಿರುವ ನರಮೇಧ ಎಂದು ಗವರ್ನರ್ ತಿಳಿಸಿದ್ದಾರೆ.