ಮಾಸ್ಕೋ, ಮಾ 12 (DaijiworldNews/MS): ಉಕ್ರೇನ್ನ ಆಕ್ರಮಣಕ್ಕಾಗಿ ರಷ್ಯಾದ ವಿರುದ್ಧ ವಿಧಿಸಲಾದ ನಿರ್ಬಂಧಗಳು ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ ಕುಸಿತಕ್ಕೆ ಕಾರಣವಾಗಬಹುದು ಎಂದು ರಷ್ಯಾ ಎಚ್ಚರಿಸಿದೆ.
ಉಕ್ರೇನ್ ಮೇಲೆ ದಾಳಿ ನಿಲ್ಲಿಸದ ರಷ್ಯಾಗೆ ಪಾಠ ಕಲಿಸುವ ಸಲುವಾಗಿ ಅಮರಿಕೆ ಅಧ್ಯಕ್ಷ ಜೋ ಬಿಡೆನ್ ರಷ್ಯಾದ ತೈಲ ಆಮದುಗಳ ಮೇಲೆ ನಿರ್ಬಂಧ ಘೋಷಿಸಿದ್ದಾರೆ. ಈ ಹಿಂದೆ ತಾಂತ್ರಿಕ, ರಷ್ಯಾ ಬ್ಯಾಂಕ್ ಗಳು ಏರೋಸ್ಪೇಸ್ ಮತ್ತು ಮಿಲಿಟರಿ ಸಹಕಾರದ ಮೇಲೆ ನಿರ್ಬಂಧಗಳನ್ನು ವಿಧಿಸಿತ್ತು. ಹೀಗಾಗಿ ನಿರ್ಬಂಧಗಳನ್ನು ತಕ್ಷಣ ತೆಗೆದುಹಾಕುವಂತೆ ರಷ್ಯಾ ಎಚ್ಚರಿಕೆ ನೀಡಿದೆ.
"ರಷ್ಯಾದ ವಿರುದ್ಧ ಪಾಶ್ಚಿಮಾತ್ಯ ನಿರ್ಬಂಧಗಳು ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವು ಕುಸಿತಕ್ಕೆ ಕಾರಣವಾಗಬಹುದು . ರಷ್ಯಾದ ವಿಭಾಗ ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಕಕ್ಷೆಯನ್ನು ಸರಿದೂಗಿಸಲು ಸಹಾಯ ಮಾಡುತ್ತದೆ .ನಮ್ಮ ಸಹಕಾರಕ್ಕೆ ನೀವು ಅಡ್ಡಿಪಡಿಸಿದರೆ, ಐಎಸ್ಎಸ್ ತನ್ನ ಕಕ್ಷೆಯಿಂದ ಕೆಳಗೆ ಕುಸಿಯಬಹುದು. ಸುಮಾರು 500 ಟನ್ ತೂಕದ ಬಾಹ್ಯಾಕಾಶ ನಿಲ್ದಾಣದ ಭಾಗಗಳು ಸಮುದ್ರಕ್ಕೆ ಅಥವಾ ಭೂಮಿಗೆ ಬೀಳಲು ಕಾರಣಗಬಹುದು". ಹೀಗಾಗಿ ನಿರ್ಬಂಧ ಕ್ರಮಗಳನ್ನು ತೆಗೆದುಹಾಕಲು ರಷ್ಯಾದ ಬಾಹ್ಯಾಕಾಶ ಸಂಸ್ಥೆ ರೋಸ್ಕೋಸ್ಮೊಸ್ ಮುಖ್ಯಸ್ಥರು ಕರೆ ನೀಡಿದ್ದಾರೆ.
ಈ ಹಿಂದೆಯೂ ರೋಸ್ಕೋಸ್ಮೊಸ್ ಮುಖ್ಯಸ್ಥರು, " ಅಮೆರಿಕದ ದಿಗ್ಬಂಧನಗಳ ವಿರುದ್ದ ರಷ್ಯಾದ ಬಾಹ್ಯಾಕಾಶ ಸಂಸ್ಥೆ ರೋಸ್ಕೊಸ್ಮೊಸ್ ಮುಖ್ಯಸ್ಥರು ತರಾಟೆಗೆ ತೆಗೆದುಕೊಂಡಿದ್ದಾರೆ. ಹೊಸ ಯುಎಸ್ ನಿರ್ಬಂಧಗಳು ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ(ಐಎಸ್ಎಸ್)ದಲ್ಲಿ ಉಭಯ ದೇಶಗಳ ನಡುವಿನ ಸಹಕಾರವನ್ನು ಘಾಸಿಗೊಳಿಸಬಹುದು" ಎಂದು ಎಚ್ಚರಿಕೆ ನೀಡಿದ್ದರು.