ರಷ್ಯಾ, ಮಾ 14 (DaijiworldNews/HR): ರಷ್ಯಾವು ಉಕ್ರೇನ್ ಮೇಲೆ ನಡೆಸುತ್ತಿರುವ ದಾಳಿ ರಷ್ಯಾದ ಸಾಮಾಜಿಕ ಮಾಧ್ಯಮ ಬಳಕೆದಾರರ ಮೇಲೂ ಪರಿಣಾಮ ಬೀಳುತ್ತಿದ್ದು, ರಷ್ಯನ್ನರು ಇನ್ಮುಂದೆ ಇನ್ಸ್ಟಾಗ್ರಾಮ್ ಬಳಸದಂತೆ ರಷ್ಯಾ ಸರ್ಕಾರ ಆದೇಶ ಹೊರಡಿಸಿದೆ.
ವಿಶ್ವದ ಬೇರೆ ಬೇರೆ ಸಾಮಾಜಿಕ ಮಾಧ್ಯಮ ವೇದಿಕೆಗಳು ಯುದ್ಧದ ಸಮಯದಲ್ಲಿ ರಷ್ಯಾದಿಂದ ಅವುಗಳ ಬಳಕೆಯನ್ನು ತಡೆಯಲು ವಿವಿಧ ತಾಂತ್ರಿಕ ನಿಬಂಧನೆಗಳನ್ನು ಮಾಡಿದ್ದು, ರಷ್ಯಾ ಮತ್ತು ಉಕ್ರೇನ್ ನಡುವೆ ನಡೆಯುತ್ತಿರುವ ಯುದ್ಧದ ನಡುವೆ ಜಾಹೀರಾತನ್ನು ಟ್ವಿಟರ್ ನಿಷೇಧಿಸಿದ್ದರೆ, ರಷ್ಯಾದ ರಾಜ್ಯ ಮಾಧ್ಯಮದ ಯೂಟ್ಯೂಬ್ ಚಾನೆಲ್ ನ ಜಾಹೀರಾತನ್ನು ಗೂಗಲ್ ತೆಗೆದುಹಾಕಿದೆ.
ಇನ್ನು ಫೇಸ್ ಬುಕ್ ಆಯಪ್ ಅನ್ನು ರಷ್ಯಾ ಈಗಾಗಲೇ ನಿಷೇಧಿಸಿದ್ದು, ಇದೀಗ ಮೆಟಾ ಒಡೆತನದ ಎರಡನೇ ಅಪ್ಲಿಕೇಶನ್ ಇನ್ಸ್ಟಾಗ್ರಾಮ್ ಅನ್ನು ರಷ್ಯಾದಲ್ಲಿ ನಿಷೇಧಿಸಲಾಗಿದೆ.
ಫೇಸ್ ಬುಕ್ ಮತ್ತು ಇನ್ ಸ್ಟಾಗ್ರಾಮ್ ಹೊರತುಪಡಿಸಿ, ಟಿಕ್ ಟಾಕ್ ಅನ್ನು ರಷ್ಯಾದಲ್ಲಿ ಭಾಗಶಃ ನಿಷೇಧಿಸಲಾಗಿದ್ದು, ಈಗಾಗಲೇ ಅಪ್ ಲೋಡ್ ಮಾಡಲಾದ ವೀಡಿಯೊವನ್ನು ವೀಕ್ಷಿಸಬಹುದು ಆದರೆ ಹೊಸ ವೀಡಿಯೊವನ್ನು ಅಪ್ ಲೋಡ್ ಮಾಡಲು ಸಾಧ್ಯವಾಗುವುದಿಲ್ಲ ಎಂದು ತಿಳಿದು ಬಂದಿದೆ.