ಕೀವ್, ಮಾ 15 (DaijiworldNews/DB): ಯುದ್ಧ ನಿಲ್ಲಿಸುವಂತೆ ಕೋರಿ ರಷ್ಯಾ ಅಧ್ಯಕ್ಷರೊಂದಿಗೆ ಉಕ್ರೇನ್ ಅಧ್ಯಕ್ಷ ವೊಲೆಡಿಮಿರ್ ಝೆಲೆನ್ಸ್ಕಿ ನಡೆಸುತ್ತಿರುವ ಮಾತುಕತೆ ಮಂಗಳವಾರವೂ ಮುಂದುವರಿಯುತ್ತಿದೆ.
ಉಕ್ರೇನ್ ಅಧ್ಯಕ್ಷ ವೊಲೆಡಿಮಿರ್ ಝೆಲೆನ್ಸ್ಕಿ ಅವರು ಸೋಮವಾರ ತಡವಾಗಿ ಈ ಮಾಹಿತಿ ನೀಡಿದ್ದು, ರಷ್ಯಾ ಅಧ್ಯಕ್ಷರೊಂದಿಗಿನ ಸೋಮವಾರದ ಮಾತುಕತೆಯಲ್ಲಿ ಯಾವುದೇ ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲಾಗಿಲ್ಲ. ಹೀಗಾಗಿ ಮಾತುಕತೆ ಮಂಗಳವಾರವೂ ಮುಂದುವರಿಯುತ್ತಿದೆ ಎಂದಿದ್ದಾರೆ. ಆದರೆ, ಪ್ರತಿಕ್ರಿಯೆ ಉತ್ತಮವಾಗಿದೆ ಎಂದೂ ತಮ್ಮ ವೀಡಿಯೋ ಸಂದೇಶದಲ್ಲಿ ಹೇಳಿದ್ದಾರೆ.
ಇದೇ ವೇಳೆ ಯುದ್ಧ ನಿಲ್ಲಿಸುವಂತೆ ರಷ್ಯಾದೊಂದಿಗೆ ನಡೆಸುತ್ತಿರುವ ಮಾತುಕತೆ ಪ್ರಯತ್ನದ ಭಾಗವಾಗಿ ಇಸ್ರೇಲ್ ಪ್ರಧಾನಿ ನಫ್ತಾಲಿ ಬೆನ್ನೆಟ್ ಅವರೊಂದಿಗೂ ಮಾತನಾಡಲಾಗಿದೆ ಎಂದಿದ್ದಾರೆ.