ಕೀವ್, ಮಾ 16 (DaijiworldNews/DB): ಉಕ್ರೇನ್ ನ ಮಾರಿಯುಪೋಲ್ ಆಸ್ಪತ್ರೆಯನ್ನು ರಷ್ಯಾ ಸೇನೆ ವಶಕ್ಕೆ ಪಡೆದಿದ್ದು, ಆಸ್ಪತ್ರೆಯಲ್ಲಿದ್ದ 400 ಮಂದಿಯನ್ನು ಒತ್ತೆಯಾಳುಗಳಾಗಿ ಇರಿಸಿಕೊಂಡಿದೆ.
ಉಕ್ರೇನ ನ ಹಲವಾರು ನಗರ, ಪ್ರಮುಖ ಕಟ್ಟಡಗಳು ರಷ್ಯಾ ವಶವಾಗಿದೆ. ಇದೀಗ ಮಾರಿಯುಪೋಲ್ನಲ್ಲಿರುವ ಅತಿದೊಡ್ಡ ಆಸ್ಪತ್ರೆಯನ್ನೂ ರಷ್ಯಾ ತನ್ನ ವಶಕ್ಕೆ ತೆಗೆದುಕೊಂಡಿದ್ದು, ವೈದ್ಯರು ಮತ್ತು ರೋಗಿಗಳು ಸೇರಿದಂತೆ 400 ಜನರನ್ನುಒತ್ತೆಯಾಳಾಗಿರಿಸಿಕೊಂಡಿದೆ. ಯಾರನ್ನೂ ಹೊರಗೆ ತೆರಳಲು ರಷ್ಯಾದ ಸೇನೆ ಬಿಡುತ್ತಿಲ್ಲ ಎಂದು ಉಕ್ರೇನ್ ಆರೋಪಿಸಿರುವುದಾಗಿ ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.
ರಷ್ಯಾ-ಉಕ್ರೇನ್ ನಡುವಿನ ಯುದ್ಧ ಇಂದಿಗೆ 21ನೇ ದಿನಕ್ಕೆ ಕಾಲಿರಿಸಿದೆ. ಈಗಾಗಲೇ ಉಕ್ರೇನ್ ನ ಕೆಲವು ಪಟ್ಟಣ, ಕಟ್ಟಡಗಳನ್ನು ರಷ್ಯಾ ಸೇನೆ ತನ್ನ ವಶಕ್ಕೆ ಪಡೆದುಕೊಂಡಿದೆ.