ಕೀವ್/ಎಲ್ವೀವ್, ಮಾ 17 (DaijiworldNews/DB): ಉಕ್ರೇನ್ ನ ಮರಿಯುಪೋಲ್ ಪಟ್ಟಣದಲ್ಲಿರುವ ರಂಗಮಂದಿರದ ಮೇಲೆ ರಷ್ಯಾ ಪಡೆ ಭೀಕರ ಬಾಂಬ್ ದಾಳಿ ನಡೆಸಿದ್ದು, ಸಾವಿರಕ್ಕೂ ಹೆಚ್ಚು ಸಾವು ಸಂಭವಿಸಿದೆ ಎನ್ನಲಾಗಿದೆ.
ಈ ರಂಗಮಂದಿರದಲ್ಲಿ ಮಕ್ಕಳೂ ಸೇರಿದಂತೆ ಸಾವಿರಾರು ಮಂದಿ ಆಶ್ರಯ ಪಡೆಯುತ್ತಿದ್ದರು. ಗುರುವಾರ ರಷ್ಯಾ ದಾಳಿ ನಡೆಸಿ ಸಾವಿರಾರು ಮಂದಿಯ ಸಾವಿಗೆ ಕಾರಣವಾಗಿದೆ ಎಂದು ಸ್ಥಳೀಯ ಅಧಿಕಾರಿಯೋರ್ವರು ತಿಳಿಸಿರುವುದಾಗಿ ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.
ಇದೇ ವೇಳೆ ಉಕ್ರೇನ್ ನ ರಂಗಮಂದಿರದ ಮೇಲೆ ಬಾಂಬ್ ದಾಳಿ ಮಾಡಿರುವ ರಷ್ಯಾದ ಕ್ರಮಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ. ಒಂದೆಡೆ ಶಾಂತಿ ಮಾತುಕತೆ ನಡೆಸುತ್ತಿರುವ ಸಂದರ್ಭದಲ್ಲಿಯೇ ರಷ್ಯಾ ಉಕ್ರೇನ್ ಮೇಲೆ ಯುದ್ಧ ಮುಂದುವರಿಸಿದ್ದು, ವ್ಲಾದಿಮಿರ್ ಪುಟಿನ್ ಯುದ್ಧಾಪರಾಧಿ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡೆನ್ ವಾಗ್ದಾಳಿ ನಡೆಸಿದ್ದಾರೆ.