ಢಾಕಾ, ಮಾ 18 (DaijiworldNews/HR): ಬಾಂಗ್ಲಾದೇಶದ ಢಾಕಾದ ವಾರಿಯಲ್ಲಿರುವ 222 ಲಾಲ್ ಮೋಹನ್ ಸಹಾ ಸ್ಟ್ರೀಟ್ನಲ್ಲಿರುವ ಇಸ್ಕಾನ್ ರಾಧಾಕಾಂತ ದೇವಸ್ಥಾನದ ಮೇಲೆ 200 ಮಂದಿ ದಾಳಿ ನಡೆಸಿ ಹಾನಿ ಮಾಡಿ ದೇವಸ್ಥಾನವನ್ನು ಲೂಟಿ ಮಾಡಿದ್ದಾರೆ ಎಂದು ವರದಿಯಾಗಿದೆ.
ಹಾಜಿ ಸಫಿಉಲ್ಲಾ ನೇತೃತ್ವದ ಗುಂಪೊಂದು ಈ ಕೃತ್ಯ ಎಸಗಿದ್ದು, ದಾಳಿಯಲ್ಲಿ ಸುಮಂತ್ರ ಚಂದ್ರ, ಶ್ರವಣ್, ನಿಹಾರ್ ಹಲ್ದಾರ್, ರಾಜೀವ್ ಭದ್ರ ಸೇರಿದಂತೆ ಅನೇಕ ಜನರು ಗಾಯಗೊಂಡಿದ್ದಾರೆ.
ಇನ್ನು ಕಳೆದ ವರ್ಷ ಬಾಂಗ್ಲಾದೇಶದ ಕೊಮಿಲ್ಲಾ ಪಟ್ಟಣದ ನನುವಾರ್ ದಿಘಿ ಸರೋವರದ ಬಳಿಯ ದುರ್ಗಾ ಪೂಜೆ ವೇಳೆ ಕುರಾನ್ ಅನ್ನು ಅಪವಿತ್ರಗೊಳಿಸಲಾಗಿದೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಸುದ್ದಿ ಹರಡಿದ ಬೆನ್ನಲ್ಲೇ ಉಂಟಾದ ಹಿಂಸಾಚಾರದಲ್ಲಿ ಮೂವರನ್ನು ಹತ್ಯೆಮಾಡಲಾಗಿತ್ತು.