ವುಹಾನ್, ಮಾ 19 (DaijiworldNews/MS): ಜಾಗತಿಕವಾಗಿ ಕರೊನಾ ವೈರಸ್ ಪ್ರಕರಣಗಳಲ್ಲಿ ತೀವ್ರ ಕುಸಿತದ ನಡುವೆಯೇ ಚೀನಾದಲ್ಲಿ ಕೊವೀಡ್ ಸಾಂಕ್ರಾಮಿಕ ಉಲ್ಬಣಿಸಿದೆ. ಚೀನಾದಲ್ಲಿ 2021ರ ಜನವರಿ ನಂತರ ಕರೊನಾದಿಂದ ಮೊದಲ ಸಾವು ಸಂಭವಿಸಿದೆ. ಚೀನಾದ ರಾಷ್ಟ್ರೀಯ ಆರೋಗ್ಯ ಅಧಿಕಾರಿಗಳು ಶನಿವಾರ ಎರಡು ಕೊವೀಡ್ ಸಾವುಗಳನ್ನು ವರದಿ ಮಾಡಿದ್ದಾರೆ.
ಚೀನಾದಲ್ಲಿ ಒಮಿಕ್ರಾನ್ ಸಮುದಾಯಕ್ಕೆ ಹರಡಿದ್ದು, ಶನಿವಾರ 2,157 ಹೊಸ ಕೋವಿಡ್-19 ಪ್ರಕರಣಗಳು ವರದಿಯಾಗಿವೆ. ಅದರಲ್ಲೂ ಚೀನಾದ ಜಿಲಿನ್ ಪ್ರಾಂತ್ಯದಲ್ಲೆ ಹೆಚ್ಚಿನ ಪ್ರಕರಣಗಳು ಕಂಡುಬಂದಿವೆ.
ನಡುವೆ ಅಂತಾರಾಷ್ಟ್ರೀಯ ಪ್ರಯಾಣವನ್ನು ನಿರ್ಬಂಧಿಸುವ ಮತ್ತು ಹೊರಗಿನ ಪ್ರಪಂಚದೊಂದಿಗೆ ಸಂಪರ್ಕಗಳನ್ನು ಕಡಿತಗೊಳಿಸುವ ಹೆಚ್ಚು ಟೀಕೆಗೊಳಗಾದ ತನ್ನ 'ಡೈನಾಮಿಕ್ ಶೂನ್ಯ-ಕೋವಿಡ್' ನೀತಿಯನ್ನು ಸಡಿಲಿಸುವುದನ್ನು ಚೀನಾ ತಳ್ಳಿಹಾಕುವ ಮೂಲಕ ನಿರ್ಬಂಧಗಳು ಮುಂದುವರಿಯುತ್ತದೆ ಎಂದು ತಿಳಿಸಿದೆ.
ಶೂನ್ಯ-ಕೋವಿಡ್' ನೀತಿಯ ತಂತ್ರವು ಸಾಮೂಹಿಕ ಪರೀಕ್ಷೆ ಮತ್ತು ಕಟ್ಟುನಿಟ್ಟಾದ ಲಾಕ್ಡೌನ್ಗಳ ಮೇಲೆ ಕೇಂದ್ರೀಕರಿಸುತ್ತದೆ ಮತ್ತು ಎಲ್ಲಾ ಹೊಸ ಪ್ರಕರಣಗಳು ಕ್ವಾರಂಟೈನ್ನಲ್ಲಿ ಅಥವಾ ಸಂಪರ್ಕ ಪತ್ತೆಹಚ್ಚುವಿಕೆಯವವರೆಗೆ ನಿವಾಸಿಗಳು ತಮ್ಮ ಮನೆಗಳನ್ನು ತೊರೆಯುವುದನ್ನು ನಿಷೇಧಿಸಲಾಗಿದೆ.