ಲಂಡನ್, ಮಾ 21 (DaijiworldNews/MS): ಲಂಡನ್ನಲ್ಲಿರುವ ವಿದ್ಯಾರ್ಥಿನಿಲಯದಲ್ಲಿ ಭಾರತೀಯ ಮೂಲದ ಬ್ರಿಟನ್ ಪ್ರಜೆಯಾಗಿರುವ ಯುವತಿಯನ್ನು ಹಲ್ಲೆ ನಡೆಸಿ ಹತ್ಯೆಗೈದ ಆರೋಪದ ಮೇಲೆ ಸ್ಕಾಟ್ಲೆಂಡ್ ಯಾರ್ಡ್ ಪೊಲೀಸರ ತಂಡವು ಟ್ಯುನಿಷಿಯಾ ಪ್ರಜೆಯನ್ನು ಬಂಧಿಸಿದೆ.
ಮೃತ ಮಹಿಳೆಯನ್ನು 19 ವರ್ಷದ ಬ್ರಿಟನ್ ಪ್ರಜೆಯಾಗಿರುವ ಸಬಿತಾ ಥನ್ವಾನಿ ಎಂದು ಗುರುತಿಸಲಾಗಿದ್ದು, ಶನಿವಾರ ಲಂಡನ್ನ ಕ್ಲರ್ಕೆನ್ವೆಲ್ ಪ್ರದೇಶದ ಅರ್ಬರ್ ಹೌಸ್ ವಿದ್ಯಾರ್ಥಿಗಳು ವಾಸವಿದ್ದ ಫ್ಲಾಟ್ನಲ್ಲಿ, ಕುತ್ತಿಗೆಗೆ ಗಂಭೀರ ಗಾಯಗಳೊಂದಿಗೆ ಪತ್ತೆಯಾಗಿದ್ದರು.
"ಸಬಿತಾ ಥನ್ವಾನಿಯ ಪರಿಚಯಸ್ಥ , ಕೊಲೆ ಆರೋಪಿ 22 ವರ್ಷದ ಮಹರ್ ಮಾರೂಫ್ ನನ್ನು ಘಟನೆ ನಡೆದ ಪ್ರದೇಶದ ಸುತ್ತಮುತ್ತಲಿನಿಂದಲೇ ಬಂಧಿಸಲಾಗಿದೆ" ಎಂದು ಮೆಟ್ ಪೋಲಿಸ್ ಸ್ಪೆಷಲಿಸ್ಟ್ ಕ್ರೈಮ್ ಘಟಕದ ಡಿಟೆಕ್ಟಿವ್ ಮುಖ್ಯ ಇನ್ಸ್ಪೆಕ್ಟರ್ ಲಿಂಡಾ ಬ್ರಾಡ್ಲಿ ಹೇಳಿದ್ದಾರೆ.
"ಮಾರೂಫ್ ಸಬಿತಾ ಅವರೊಂದಿಗೆ ಸಂಬಂಧ ಹೊಂದಿದ್ದರು ಆದರೆ ಅವರು ವಿದ್ಯಾರ್ಥಿಯಾಗಿರಲಿಲ್ಲ. ಆರೋಪಿ ಯಾವುದೇ ಸ್ಥಿರ ವಿಳಾಸವನ್ನು ಹೊಂದಿರದ ಟ್ಯುನೀಷಿಯಾದ ಪ್ರಜೆಯಾಗಿದ್ದಾರೆ, ”ಎಂದು ಡಿಟೆಕ್ಟಿವ್ ಬ್ರಾಡ್ಲಿ ವಿವರಿಸಿದ್ದಾರೆ.
ಥನ್ವಾನಿ ಲಂಡನ್ ವಿಶ್ವವಿದ್ಯಾಲಯದಲಲಿ ಓದುತ್ತಿದದು ಶುಕ್ರವಾರ ಮಾರೂಫ್ ಜೊತೆಯಲ್ಲಿ ಕಾಣಿಸಿಕೊಂಡಿದ್ದಳು ಎಂದು ವರದಿಯಾಗಿದೆ.