ಕೈವ್, ಮಾ 21 (DaijiworldNews/HR): ರಷ್ಯಾವು ಉಕ್ರೇನ್ ಮೇಲಿನ ನಡೆಸಿರುವ ದಾಳಿ 26ನೇ ದಿನಕ್ಕೆ ಕಾಲಿಟ್ಟಿದ್ದು, ನಾನು ರಷ್ಯಾಗೆ ಶರಣಾಗುವುದಿಲ್ಲ ಎಂದು ಸ್ಪಷ್ಟ ಸಂಕೇತವನ್ನು ಉಕ್ರೇನ್ ಸೇನೆ ನೀಡಿದೆ.
ಮಾರಿಯುಪೋಲ್ನಲ್ಲಿನ ಆಡಳಿತ ವರ್ಗಕ್ಕೆ ಶರಣಾಗುವಂತೆ ರಷ್ಯಾ ಸೂಚಿಸಿದ್ದು, ಆದರೆ ಈ ಶರಣಾಗತಿಯ ಪ್ರಸ್ತಾಪವನ್ನು ಉಕ್ರೇನ್ ಸರಕಾರ ತಿರಸ್ಕರಿಸಿದೆ.
ಇನ್ನೊಂದೆಡೆ ರಷ್ಯಾ ಸೈನ್ಯವು ಭಾನುವಾರ ರಾತ್ರಿ ರಾಜಧಾನಿ ಕೈವ್ನ ವಸತಿ ಪ್ರದೇಶಗಳ ಮೇಲೆ ವೈಮಾನಿಕ ದಾಳಿ ನಡೆಸಿದ್ದು, ಈ ವೈಮಾನಿಕ ದಾಳಿಯಲ್ಲಿ ಅನೇಕರು ಸಾವಿಗೀಡಾಗಿ ಅನೇಕ ಮನೆಗಳು ಮತ್ತು ಶಾಪಿಂಗ್ ಮಾಲ್ ಧ್ವಂಸಗೊಂಡಿವೆ.
ಇನ್ನು ರಷ್ಯಾಕ್ಕೆ ಶರಣಾಗುವ ಪ್ರಶ್ನೆಯೇ ಇಲ್ಲ ಎಂದು ಉಕ್ರೇನ್ನ ಉಪ ಪ್ರಧಾನಿ ಐರಿನಾ ವೆರೆಶ್ಚುಕ್ ಹೇಳಿದ್ದು, ಯಾವುದೇ ರೀತಿಯಲ್ಲಿ ಶರಣಾಗತಿ ಅಥವಾ ಶಸ್ತ್ರಾಸ್ತ್ರಗಳನ್ನು ತ್ಯಜಿಸುವಂತಹ ಮಾತುಕತೆಗಳು ರಷ್ಯಾದ ಜೊತೆ ನಡೆಯಲು ಸಾಧ್ಯವಿಲ್ಲ ಎಂದಿದ್ದಾರೆ.