ವಿಶ್ವಸಂಸ್ಥೆ, ಮಾ 21 (DaijiworldNews/MS): ಭಾರತೀಯ ಅಭಿವೃದ್ಧಿ ಅರ್ಥಶಾಸ್ತ್ರಜ್ಞ ಜಯತಿ ಘೋಷ್ ಅವರನ್ನು ವಿಶ್ವ ಸಂಸ್ಥೆಯ ಸೆಕ್ರೆಟರಿ ಜನರಲ್ ಆಂಟೋನಿಯೊ ಗುಟೆರಸ್ ಅವರು ಪರಿಣಾಮಕಾರಿ ಬಹುಪಕ್ಷೀಯತೆಯ ಹೊಸ ಉನ್ನತ ಮಟ್ಟದ ಸಲಹಾ ಮಂಡಳಿಗೆ ನೇಮಿಸಿದ್ದಾರೆ.
66 ವರ್ಷದ ಜಯತಿ ಘೋಷ್ ಅವರು ಮ್ಯಾಸಚೂಸೆಟ್ಸ್ ಆಮ್ಹೆರ್ಸ್ಟ್ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿದ್ದಾರೆ. ಅವರು ಈ ಹಿಂದೆ ಅರ್ಥಶಾಸ್ತ್ರದ ಪ್ರಾಧ್ಯಾಪಕರಾಗಿದ್ದರು ಮತ್ತು ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ಸಾಮಾಜಿಕ ವಿಜ್ಞಾನಗಳ ಸ್ಕೂಲ್ ಆಫ್ ಎಕನಾಮಿಕ್ ಸ್ಟಡೀಸ್ ಮತ್ತು ಪ್ಲಾನಿಂಗ್ ಸೆಂಟರ್ನ ಅಧ್ಯಕ್ಷರಾಗಿದ್ದರು. ಅವರು ವಿಶ್ವಸಂಸ್ಥೆಯ ಆರ್ಥಿಕ ಮತ್ತು ಸಾಮಾಜಿಕ ವ್ಯವಹಾರಗಳ ಉನ್ನತ ಮಟ್ಟದ ಸಲಹಾ ಮಂಡಳಿಯ ಸದಸ್ಯರೂ ಆಗಿದ್ದಾರೆ.
66 ವರ್ಷದ ಘೋಷ್ ಅವರು ಮ್ಯಾಸಚೂಸೆಟ್ಸï ಆಮ್ಹೆಸ್ಟರ್ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿದ್ದಾರೆ. ಅವರು ಈ ಹಿಂದೆ ಅರ್ಥಶಾಸ್ತ್ರದ ಪ್ರಾಧ್ಯಾಪಕರಾಗಿದ್ದರು ಮತ್ತು ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ಸಾಮಾಜಿಕ ವಿಜ್ಞಾನಗಳ ಸ್ಕೂಲ್ ಆಫ್ ಎಕನಾಮಿಕ್ ಸ್ಟಡೀಸ್ ಮತ್ತು ಪ್ಲಾನಿಂಗ್ ಸೆಂಟರ್ನ ಅಧ್ಯಕ್ಷರಾಗಿದ್ದರು. ಅವರು ವಿಶ್ವ ಸಂಸ್ಥೆ ಆರ್ಥಿಕ ಮತ್ತು ಸಾಮಾಜಿಕ ವ್ಯವಹಾರಗಳ ಉನ್ನತ ಮಟ್ಟದ ಸಲಹಾ ಮಂಡಳಿಯ ಸದಸ್ಯರೂ ಆಗಿದ್ದಾರೆ.
ಯುಎನ್ ಮುಖ್ಯಸ್ಥ ಗುಟೆರೆಸ್ ಅವರು ಲೈಬೀರಿಯನ್ ಮಾಜಿ ಅಧ್ಯಕ್ಷ ಮತ್ತು ನೊಬೆಲ್ ಪ್ರಶಸ್ತಿ ವಿಜೇತ ಎಲ್ಲಾನ್ ಜಾನ್ಸನ್ ಸಿರ್ಲೀಫ್ ಮತ್ತು ಮಾಜಿ ಸ್ವೀಡಿಷ್ ಪ್ರಧಾನಿ ಸ್ಟೀಫನ್ ಲೋಫ್ವೆನ್ ಅವರನ್ನು ಸಹ-ಅಧ್ಯಕ್ಷರಾಗಿ ಪರಿಣಾಮಕಾರಿ ಬಹುಪಕ್ಷೀಯತೆಯ ಸಲಹಾ ಮಂಡಳಿಯ ಸ್ಥಾಪನೆಯನ್ನು ಘೋಷಿಸಿದರು.
ಜಯತಿ ಘೋಷ್ ಅವರನ್ನು 12 ಸದಸ್ಯರಿರುವ ಮಂಡಳಿಗೆ ಹೆಸರಿಸಲಾಗಿದೆ. ಇದು ವಿಶ್ವಸಂಸ್ಥೆಯ ವಿಶ್ವವಿದ್ಯಾನಿಲಯದ ನೀತಿ ಸಂಶೋಧನಾ ಕೇಂದ್ರವು ಕಾರ್ಯದರ್ಶಿ-ಜನರಲ್ನ ಕಾರ್ಯನಿರ್ವಾಹಕ ಕಚೇರಿಯೊಂದಿಗೆ ನಿಕಟ ಸಮನ್ವಯದೊಂದಿಗೆ ತನ್ನ ಕೆಲಸದಲ್ಲಿ ಬೆಂಬಲಿಸುತ್ತದೆ.