ಕೀವ್, ಮಾ 23 (DaijiworldNews/DB): ಉಕ್ರೇನ್ ನ ಚೆರ್ನೋಬಿಲ್ ಪರಮಾಣು ವಿದ್ಯುತ್ ಸ್ಥಾವರ ದಲ್ಲಿನ ಹೊಸ ಪ್ರಯೋಗಾಲಯವನ್ನು ರಷ್ಯಾ ಸೇನೆ ನಾಶ ಪಡಿಸಿದೆ.
ವಿಕಿರಣಶೀಲ ತ್ಯಾಜ್ಯದ ನಿರ್ವಹಣೆಯನ್ನು ಸುಧಾರಿಸಲು ಕೆಲಸ ಮಾಡುತ್ತಿದ್ದ ಪ್ರಯೋಗಾಲಯ ಇದಾಗಿತ್ತು. ಯುರೋಪಿಯನ್ ಕಮಿಷನ್ ನ ಪ್ರೋತ್ಸಾಹದೊಂದಿಗೆ ಆರು ಮಿಲಿಯನ್ ಯೂರೋ ವೆಚ್ಚದಲ್ಲಿ ಈ ಪ್ರಯೋಗಾಲಯವನ್ನು 2015ರಲ್ಲಿ ತೆರೆಯಲಾಗಿತ್ತು. ಯುದ್ದ ಆರಂಭವಾದ ದಿನಗಳಲ್ಲೇ ರಷ್ಯಾ ಈ ಸ್ಥಾವರವನ್ನು ವಶಪಡಿಸಿಕೊಂಡಿತ್ತು. ಇದೀಗ ಅದೇ ಸ್ಥಾವರವನ್ನು ನಾಶ ಮಾಡಿದೆ.
ಹೆಚ್ಚು ಗಾಢವಾಗಿರುವ ಮಾದರಿಗಳು ಮತ್ತು ರೇಡಿಯೋನ್ಯೂಕ್ಲೈಡ್ ಸ್ಯಾಂಪಲ್ ಗಳನ್ನು ಈ ಪ್ರಯೋಗಾಲಯ ಹೊಂದಿದೆ. ಇದು ವಿಕಿರಣ ಸೂಸುವ ರಾಸಾಯನಿಕ ಅಂಶವಾಗಿದೆ ಎಂದು ಚೆರ್ನೋಬಿಲ್ ಹೊರ ವಲಯದ ಅಧಿಕಾರಿಗಳು ತಿಳಿಸಿರುವುದಾಗಿ ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ.