ಯುನೈಟೆಡ್ ನೇಶನ್ಸ್, ಮಾ 24 (DaijiworldNews/DB): ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸಭೆಯಲ್ಲಿ ರಷ್ಯಾ ವಿರುದ್ಧ ಬಹುತೇಕ ಸದಸ್ಯ ರಾಷ್ಟ್ರಗಳು ಮತ ನಿರ್ಣಯ ಹೊರಡಿಸಿದ್ದು, ಅನೇಕ ರಾಷ್ಟ್ರಗಳು ಉಕ್ರೇನ್ ಪರ ನಿಂತಿವೆ. ಆದರೆ ಮತ ನಿರ್ಣಯದಿಂದ ಭಾರತ ದೂರ ಸರಿದಿದೆ.
ಉಕ್ರೇನ್ ಮೇಲೆ ರಷ್ಯಾ ಸಮರ ಆರಂಭಿಸಿ ಇಂದಿಗೆ ತಿಂಗಳಾಗಿದೆ. ಯುದ್ದದ ತೀವ್ರತೆ ದಿನೇದಿನೇ ಬಿರುಸುಗೊಳ್ಳುತ್ತಿದ್ದು, ಉಕ್ರೇನಿಯನ್ನರು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಆಶ್ರಯ, ಆಹಾರವಿಲ್ಲದೆ ಕಂಗಾಲಾಗಿದ್ದಾರೆ. ಈ ನಿಟ್ಟಿನಲ್ಲಿ ಉಕ್ರೇನ್ ಜೊತೆಗೆ ನಿಲ್ಲುವ ದೃಷ್ಟಿಯಿಂದ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸಭೆಯಲ್ಲಿ ಬುಧವಾರ ರಷ್ಯಾ ವಿರುದ್ಧ ಬಹುತೇಕ ರಾಷ್ಟ್ರಗಳು ನಿರ್ಣಯ ಹೊರಡಿಸಿದ್ದು, ರಷ್ಯಾದ ವಿರುದ್ಧ ನಿಂತಿವೆ.
ರಷ್ಯಾಕ್ಕೆ ತನ್ನ ಯುದ್ಧದ ಅಗತ್ಯವನ್ನು ಸಮರ್ಥಿಸಿಕೊಳ್ಳಲು ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ 15 ಸದಸ್ಯ ರಾಷ್ಟ್ರಗಳ ಪೈಕಿ 9 ಮತಗಳು ಬೇಕಾಗಿತ್ತು. ಆದರೆ ರಷ್ಯಾಕ್ಕೆ ಕೇವಲ ಚೀನಾದಿಂದ ಮಾತ್ರ ಬೆಂಬಲ ದೊರೆತಿದ್ದು, ಉಳಿದ ಎಲ್ಲಾ ರಾಷ್ಟ್ರಗಳು ಮತದಿಂದ ದೂರ ಉಳಿದಿದ್ದವು. ಭಾರತವು ಮತ ನಿರ್ಣಯದಿಂದ ದೂರು ಸರಿದಿತ್ತು. ಹೀಗಾಗಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಉಕ್ರೇನ್ ವಿರುದ್ಧ ರಷ್ಯಾಕ್ಕೆ ಸೋಲುಂಟಾಗಿದೆ.