ವ್ಯೋಮಿಂಗ್, ಮಾ 24(DaijiworldNews/MS): ಅಮೆರಿಕದ ಏರ್ಫೋರ್ಸ್ನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಭಾರತೀಯ ಮೂಲದ ದರ್ಶನ್ ಶಾ ಅವರಿಗೆ ಕರ್ತವ್ಯದ ಸಮಯದಲ್ಲಿಯೂ ತಿಲಕವನ್ನು ಧರಿಸಲು ಅನುಮತಿ ನೀಡಲಾಗಿದೆ.
ವ್ಯೋಮಿಂಗ್ನಲ್ಲಿರುವ ಎಫ್ಇ ವಾರೆನ್ ಏರ್ ಫೋರ್ಸ್ ಬೇಸ್ನಲ್ಲಿ ನೆಲೆಸಿರುವ ಯುಎಸ್ ಏರ್ಫೋರ್ಸ್ ಏರ್ಮ್ಯಾನ್ ದರ್ಶನ್ ಶಾ ಅವರಿಗೆ ಕರ್ತವ್ಯದಲ್ಲಿರುವಾಗ ತಿಲಕ್ ಚಾಂಡ್ಲೋ ಧರಿಸಲು ಧಾರ್ಮಿಕ ವಿನಾಯಿತಿ ನೀಡಲಾಗಿದೆ. ಎರಡು ವರ್ಷಗಳ ಹಿಂದೆ ಇವರು ಸೇವೆಗೆ ಸೇರಿದ್ದರು.
ಫ್ರಾನ್ಸಿಸ್ಇ ವಾರನ್ ಏರ್ಫೋರ್ಸ್ನಲ್ಲಿ ತಂತ್ರಜ್ಞರಾಗಿರುವ ದರ್ಶನ್ ಶಾ 2020ರಿಂದಲೂ ತಿಲಕವನ್ನು ಧರಿಸಲು ಅನುಮತಿ ನೀಡುವಂತೆ ಮನವಿ ಮಾಡುತ್ತಲೇ ಇದ್ದರು.
ಕೊನೆಗೂ ಇವರಿಗೆ ಫೆಬ್ರವರಿ 22ರಂದು ಕರ್ತವ್ಯದ ಸಂದರ್ಭದಲ್ಲಿ ತಿಲಕ ಧರಿಸಲು ಅನುಮತಿ ನೀಡಲಾಗಿದೆ.
ಹಿಂದೂ ಕುಟುಂಬದಲ್ಲಿ ಜನಿಸಿರುವ ದರ್ಶನ್ ಶಾ, 2020ರ ಜೂನ್ ತಿಂಗಳಲ್ಲಿ ಮಿಲಿಟರಿ ತರಬೇತಿಗೆ ಹಾಜರಾಗಲು ಆರಂಭಿಸಿದಾಗಿನಿಂದ ತಮ್ಮ ಸಮವಸ್ತ್ರದ ಭಾಗವಾಗಿ ತಿಲಕವನ್ನು ಧರಿಸಲು ಬಯಸಿದ್ದರು. ಅದರಂತೆ ಇದೀಗ ಅಮೆರಿಕ ಏರ್ಫೋರ್ಸ್ ದರ್ಶನ್ ಬಯಕೆಗೆ ಅಸ್ತು ಎಂದಿದೆ.
"ಟೆಕ್ಸಾಸ್, ಕ್ಯಾಲಿಫೋರ್ನಿಯಾ, ನ್ಯೂಜೆರ್ಸಿ ಮತ್ತು ನ್ಯೂಯಾರ್ಕ್ನ ನನ್ನ ಸ್ನೇಹಿತರು ನನಗೆ ಮತ್ತು ನನ್ನ ಪೋಷಕರಿಗೆ ಸಂದೇಶ ಕಳುಹಿಸುತ್ತಿದ್ದು ವಾಯುಪಡೆ ನೀಡಿದ ಅನುಮತಿಗೆ ಅವರು ತುಂಬಾ ಸಂತೋಷಪಟ್ಟಿದ್ದಾರೆ" ಎಂದು ಶಾ ಹೇಳಿದ್ದಾರೆ.