ನೆದರ್ಲೆಂಡ್, ಮಾ 26 (DaijiworldNews/MS): ಇದೇ ಮೊದಲ ಬಾರಿಗೆ ಮಾನವನ ರಕ್ತದಲ್ಲಿ ಮೈಕ್ರೊಪ್ಲಾಸ್ಟಿಕ್ (ಪ್ಲಾಸ್ಟಿಕ್ ನ ಸಣ್ಣ ಕಣಗಳು) ಪತ್ತೆಯಾಗಿದ್ದು, ಈ ಕಣಗಳು ಇನ್ಮುಂದೆ ಮಾನವನ ಇತರ ಅಂಗಗಳಿಗೆ ಪ್ರವೇಶಿಸಬಹುದು ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ.
ಅಗೋಚರ ಪ್ಲಾಸ್ಟಿಕ್ನ ಸಣ್ಣ ಕಣಗಳು ಈಗಾಗಲೇ ಭೂಮಿಯ ಮೇಲಿನ ಎಲ್ಲೆಡೆ, ಆಳವಾದ ಸಾಗರಗಳಿಂದ ಎತ್ತರದ ಪರ್ವತಗಳವರೆಗೆ ಮತ್ತು ಗಾಳಿ, ಮಣ್ಣು ಮತ್ತು ಬಹುಪಾಲುಆಹಾರ ಸರಪಳಿಯಲ್ಲಿ ಕಂಡುಬಂದಿತ್ತು.
ನೆದರ್ಲೆಂಡ್ನ ವಿಜ್ಞಾನಿಗಳ ತಂಡವು ಆರೋಗ್ಯವಂತ ಸ್ವಯಂಸೇವಕರಿಂದ ರಕ್ತದ ಮಾದರಿಗಳನ್ನು ಪರೀಕ್ಷಿಸಿದೆ. ಪರೀಕ್ಷೆಗೊಳಪಡಿಸಿದ ಸ್ಯಾಂಪಲ್ಗಳ ಪೈಕಿ ಶೇ.80ರಷ್ಟು ಮಾದರಿಗಳಲ್ಲಿ ಮೈಕ್ರೋಪ್ಲಾಸ್ಟಿಕ್ ಇರುವುದು ದೃಢಪಟ್ಟಿದೆ.
ಅರ್ಧದಷ್ಟು ರಕ್ತದ ಮಾದರಿಗಳು ಪಿಈಟಿ ಪ್ಲಾಸ್ಟಿಕ್ನ ಇರುವುದು ಪತ್ತೆಯಾಗಿದೆ. ಇದನ್ನು ಪಾನೀಯ ಬಾಟಲಿಗಳನ್ನು ತಯಾರಿಸಲು ಹೆಚ್ಚಾಗಿ ಬಳಸಲಾಗುತ್ತದೆ. ಇನ್ನು ಮೂರನೇ ಒಂದು ಭಾಗದಷ್ಟು ಪಾಲಿಸ್ಟೈರೀನ್ ಅಂದರೆ ಬಳಿಸ್ ಬಿಸಾಡಬಹುದಾದ ಆಹಾರ ಪ್ಯಾಕೇಜಿಂಗ್ ನಲ್ಲಿ ಬಳಸುವ ಪ್ಲಾಸ್ಟಿಕ್ ಪತ್ತೆಯಾಗಿದೆ.