ಇಸ್ಲಾಮಾಬಾದ್, ಮಾ 27 (DaijiworldNews/DB): ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅವರ ಆಡಳಿತಾರೂಢ ತೆಹ್ರಿಕ್ ಇ ಇನ್ಸಾಫ್ ಪಕ್ಷದ 50 ಮಂದಿ ಸಚಿವರು ನಾಪತ್ತೆಯಾಗಿದ್ದಾರೆ ಎಂದು ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ.
25 ಮಂದಿ ಫೆಡರಲ್, ಪ್ರಾಂತೀಯ ಸಲಹೆಗಾರರು ಹಾಗೂ ವಿಶೇಷ ಸಹಾಯಕರಾಗಿದ್ದಾರೆ. ತಲಾ ನಾಲ್ವರು ರಾಜ್ಯ ಸಚಿವರು ಮತ್ತು ಸಲಹೆಗಾರರು. 19 ಮಂದಿ ವಿಶೇಷ ಸಹಾಯಕರು ಕಣ್ಮರೆಯಾಗಿದ್ದಾರೆ ಎನ್ನಲಾಗಿದೆ. ಇವರು ಸಾರ್ವಜನಿಕವಾಗಿ ಕಾಣಿಸಿಕೊಳ್ಳದಿರಲು ಕಾರಣ ಏನೆಂಬುದಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ. ಆದಾಗ್ಯೂ ಇಮ್ರಾನ್ ಖಾನ್ ವಿರುದ್ಧ ಅವಿಶ್ವಾಸ ನಿರ್ಣಯ ದಿನ ಹತ್ತಿರವಾಗುತ್ತಿದ್ದಂತೆ ಈ ಸಚಿವರು ಸಾರ್ವಜನಿಕವಾಗಿ ಕಾಣಿಸಿಕೊಳ್ಳದಿರುವುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.
ಪಾಕಿಸ್ತಾನದ ವಿದೇಶಾಂಗ ಸಚಿವ ಶಾ ಮೆಹ್ಮೂದ್ ಖುರೇಷಿ, ಮಾಹಿತಿ ಸಚಿವ ಫವಾದ್ ಚೌದರಿ, ವಿದ್ಯುತ್ ಸಚಿವ ಹಮ್ಮದ್ ಅಝರ್, ರಕ್ಷಣಾ ಸಚಿವ ಪರ್ವೇಝ್ ಖಟ್ಟಾಕ್ ಮತ್ತು ಆಂತರಿಕ ಸಚಿವ ಶೇಖ್ ರಶೀದ್ ಅವರು ಇಮ್ರಾನ್ ಖಾನ್ ಅವರ ಬೆಂಬಲ ಈಗಾಗಲೇ ಇಮ್ರಾನ್ ಖಾನ್ ಗೆ ದೊರಕಿದೆ. ಉಳಿದ ಸಚಿವರ ಬೆಂಬಲ ದೊರೆಯಲಿದೆಯೇ ಇಲ್ಲವೇ ಅವಿಸ್ವಾಸ ನಿರ್ಣಯ ಮಾಡುವ ದಿನದಂದು ಕಾದು ನೋಡಬೇಕಾಗಿದೆ.
ಅವಿಶ್ವಾಸ ಗೊತ್ತುವಳಿಯನ್ನು ಮಾರ್ಚ್ 28ಕ್ಕೆ ಮುಂದೂಡಲಾಗಿದೆ ಎಂಬುದಾಗಿ ವರದಿಗಳು ಹೇಳಿವೆ.