ಅಮೇರಿಕಾ,ಮಾ 28 (DaijiworldNews/MS): ಖ್ಯಾತ ನಟ ವಿಲ್ ಸ್ಮಿತ್ ವರು ‘ಕಿಂಗ್ ರಿಚರ್ಡ್’ ಸಿನಿಮಾದ ಅಭಿನಯಕ್ಕಾಗಿ ಅತ್ಯುತ್ತಮ ನಟ ಆಸ್ಕರ್ ಪ್ರಶಸ್ತಿ ಪಡೆದುಕೊಂಡಿದ್ದಾರೆ. ‘ದಿ ಐಸ್ ಆಫ್ ಟ್ಯಾಮಿ ಫೇ’ ಸಿನಿಮಾದಲ್ಲಿನ ನಟನೆಗಾಗಿ ಜೆಸ್ಸಿಕಾ ಚಾಸ್ಟೇನ್ ಅವರಿಗೆ ಅತ್ಯುತ್ತಮ ನಟಿ ಆಸ್ಕರ್ ಪ್ರಶಸ್ತಿ ನೀಡಲಾಗಿದೆ.
ಅಮೆರಿಕದ ಖ್ಯಾತ ಟೆನಿಸ್ ಆಟಗಾರ್ತಿ ಸೋದರಿಯರಾದ ವೀನಸ್ ವಿಲಿಯಮ್ಸ್ ಮತ್ತು ಸೆರೆನಾ ವಿಲಿಯಮ್ಸ್ ಅವರ ತಂದೆ ರಿಚರ್ಡ್ ವಿಲಿಯಮ್ಸ್ ಅವರ ಜೀವನ ಚರಿತ್ರೆಯನ್ನಾಧರಿಸಿದ ಚಿತ್ರ 'ಕಿಂಗ್ ರಿಚರ್ಡ್' ಪಾತ್ರದ ಅಭಿನಯಕ್ಕಾಗಿ ವಿಲ್ ಸ್ಮಿತ್ ಈ ಬಾರಿಯ ಅತ್ಯುತ್ತಮ ನಟ ಆಸ್ಕರ್ ಪ್ರಶಸ್ತಿ ಪಡೆದುಕೊಂಡಿದ್ದಾರೆ.
ಅತ್ಯುತ್ತಮ ಸಿನಿಮಾ ಪ್ರಶಸ್ತಿ "ಕೋಡಾ" ಪಾಲಿಗೆ ಒಲಿದುಬಂದಿದೆ. ಈ ಚಿತ್ರವನ್ನು ಶಾನ್ ಹೆಡರ್ ನಿರ್ದೇಶನ ಮಾಡಿದ್ದಾರೆ. ಅತ್ಯುತ್ತಮ ನಿರ್ದೇಶನ ಪ್ರಶಸ್ತಿಯನ್ನು "ದಿ ಪವರ್ ಆಫ್ ದಿ ಡಾಗ್ " ಸಿನಿಮಾ ನಿರ್ದೇಶನಕ್ಕಾಗಿ ಜೇನ್ ಕಾಂಪಿಯನ್ ಪಡೆದುಕೊಂಡಿದ್ದಾರೆ
ವಿಲ್ ಸ್ಮಿತ್ ಅವರು ತಮ್ಮ ಪತ್ನಿ ಜಡಾ ಪಿಂಕೆಟ್ ಸ್ಮಿತ್ ಅವರ ಬಗ್ಗೆ ಹಾಸ್ಯ ಮಾಡಿದ ನಿರೂಪಕ ಕ್ರಿಸ್ ರಾಕ್ ಗೆ ಕಪಾಳಮೋಕ್ಷ ಮಾಡುವ ಮೂಲಕ ವಿವಾದ ಹುಟ್ಟುಹಾಕಿದ್ದಾರೆ. ಪತ್ನಿಯನ್ನು ಹೀಯಾಳಿಸಿದ ಎಂಬ ಕಾರಣಕ್ಕಾಗಿ ನಟ ವಿಲ್ ಸ್ಮಿತ್ ಕೋಪಗೊಂಡು ವೇದಿಕೆ ಮೇಲೆಯೇ ನಿರೂಪಕನ ಕಪಾಳಕ್ಕೆ ಹೊಡೆದಿದ್ದಾರೆ.