ವಾಷಿಂಗ್ಟನ್, ಮಾ 30 (DaijiworldNews/DB): ಜಮ್ಮು ಕಾಶ್ಮೀರಕ್ಕೆ ಯಾವುದೇ ಕಾರಣಕ್ಕೂ ಪ್ರವಾಸ ಕೈಗೊಳ್ಳಬೇಡಿ ಎಂಬುದಾಗಿ ಅಮೆರಿಕ ಸರ್ಕಾರ ತನ್ನ ಪ್ರಜೆಗಳಿಗೆ ಸೂಚಿಸಿದೆ.
ಭಾರತ ಪ್ರವಾಸದ ವೇಳೆ ತುಸು ಎಚ್ಚರಿಕೆಯಿಂದಿರಬೇಕು. ಜಮ್ಮು ಕಾಶ್ಮೀರ ಮತ್ತು ಭಾರತ -ಪಾಕಿಸ್ತಾನದ ಗಡಿಯ 10 ಕಿ.ಮೀ ವ್ಯಾಪ್ತಿಯಲ್ಲಿ ಸಂಚರಿಸುವುದು ಸಮಂಜಸವಲ್ಲ. ಅಪರಾಧ ಮತ್ತು ಭಯೋತ್ಪಾದನೆ ಚಟುವಟಿಕೆ ಕಾರಣದಿಂದಾಗಿ ಈ ಮುನ್ನೆಚ್ಚರಿಕೆ ನೀಡಲಾಗುತ್ತಿದೆ. ಸದ್ಯ ಜಮ್ಮು ಕಾಶ್ಮೀರದಲ್ಲಿ ಪರಿಸ್ಥಿತಿ ಅಷ್ಟೇನು ಸರಿ ಇಲ್ಲದ ಕಾರಣ ಕಾಶ್ಮೀರ ಪ್ರವಾಸ ಮುಂದೂಡುವುದು ಉತ್ತಮ ಎಂದು ಸರ್ಕಾರ ತಿಳಿಸಿದೆ ಎಂಬುದಾಗಿ ಮಾಧ್ಯಮವೊಂದರ ವರದಿ ತಿಳಿಸಿದೆ.
ಅಮೆರಿಕಾ ಸರ್ಕಾರವು ತನ್ನ ಪ್ರಜೆಗಳಿಗಾಗಿ ಮಂಗಳವಾರ ಹೊಸ ಸಲಹೆಯನ್ನು ಬಿಡುಗಡೆಗೊಳಿಸಿದ್ದು, ಇದರಲ್ಲಿ ಭಾರತ ಪ್ರವಾಸ ಕೈಗೊಳ್ಳುವಾಗ ಜಮ್ಮು ಕಾಶ್ಮೀರಕ್ಕೆ ಹೋಗದಿರುವಂತೆ ತುಸು ಎಚ್ಚರವಹಿಸಬೇಕು ಎಂದು ಸಲಹೆ ಮಾಡಿದೆ.