ಇಸ್ಲಾಮಾಬಾದ್, ಏ 01 (DaijiworldNews/DB): ಇಮ್ರಾನ್ ಖಾನ್ ಪ್ರಸ್ತುತ ಪಾಕಿಸ್ತಾನದ ಮಟ್ಟಿಗೆ ಇತಿಹಾಸ. ಅವರಿಂದ ದೇಶದಲ್ಲಿ ಸೃಷ್ಟಿಯಾಗಿರುವ ಅವ್ಯವಸ್ಥೆಯನ್ನು ಶುದ್ದವಾಗಿಸಲು ಜನರು ತೊಡಗಿಸಿಕೊಳ್ಳಬೇಕು ಎಂದು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅವರ ಮಾಜಿ ಪತ್ನಿ ರೆಹಮ್ ಖಾನ್ ಹೇಳಿದ್ದಾರೆ.
ಪಾಕಿಸ್ತಾನದಲ್ಲಿ ಇಮ್ರಾನ್ ಖಾನ್ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ ನಡೆಯತ್ತಿರುವ ಸಮಯದಲ್ಲಿ ಮಾಜಿ ಪತ್ನಿ ಅವರ ವಿರುದ್ದ ಸಿಡಿದೆದ್ದಿದ್ದಾರೆ. ಸರಣಿ ಟ್ವೀಟ್ ನಡೆಸಿರುವ ಅವರು, ದೇಶದಲ್ಲಿ ಈವರೆಗೆ ಇಮ್ರಾನ್ ಖಾನ್ ಮಾಡಿದ್ದ ಅವ್ಯವಸ್ಥೆಯನ್ನು ಸರಿಪಡಿಸುವತ್ತ ಜನರು ಯೋಚಿಸಬೇಕು ಎಂದು ಬರೆದುಕೊಂಡಿದ್ದಾರೆ.
ಬುದ್ಧಿವಂತಿಕೆ ಮತ್ತು ಸಾಮರ್ಥ್ಯ ಇಮ್ರಾನ್ ಬಳಿ ಇಲ್ಲ. ನಯಾ ಪಾಕಿಸ್ತಾನವನ್ನು ನಾವು ಶುಚಿಗೊಳಿಸಬೇಕಿದೆ ಎಂದಿದ್ದಾರೆ.
ಇಮ್ರಾನ್ ಪ್ರಧಾನಿಯಾಗಿಲ್ಲದಿದ್ದಾಗ ಪಾಕಿಸ್ತಾನ ಅದ್ಭುತವಾಗಿರುತ್ತದೆ ಎಂದು ಈ ಹಿಂದೆಯೂ ಅವರು ಟೀಕಿಸಿದ್ದರು.