ಇಸ್ಲಾಮಾಬಾದ್, ಏ. 04 (DaijiworldNews/SM): ಹಲವು ಬೆಳವಣಿಗೆಗಳ ಬಳಿಕ ಪಾಕಿಸ್ತಾನ ಅಧ್ಯಕ್ಷ ಆರೀಫ್ ಅಲ್ವಿ ಭಾನುವಾರ ಪಾಕಿಸ್ತಾನದ ರಾಷ್ಟ್ರೀಯ ಅಸೆಂಬ್ಲಿಯನ್ನು ವಿಸರ್ಜನೆ ಮಾಡಿದ್ದಾರೆ. ಆ ಮೂಲಕ ಕಳೆದ ಕೆಲವು ದಿನಗಳ ನಾಟಕೀಯ ಬೆಳವಣಿಗೆಗೆ ತೆರೆ ಬಿದ್ದಂತಾಗಿದೆ.
ಮುಂದಿನ 90 ದಿನಗಳಲ್ಲಿ ಪಾಕ್ ನಲ್ಲಿ ಮತ್ತೆ ಚುನಾವಣೆ ನಡೆಯಲಿದೆ. ಪ್ರಧಾನಿ ಅವರ ಸಲಹೆ ಮೇರೆಗೆ ಅಧ್ಯಕ್ಷ ಅಲ್ವಿ ಅವರು ರಾಷ್ಟ್ರೀಯ ಅಸೆಂಬ್ಲಿಯನ್ನು ವಿಸರ್ಜನೆ ಮಾಡಿದ್ದಾರೆ ಎಂದು ಮಾಹಿತಿ ಮತ್ತು ಪ್ರಸಾರ ಸಚಿವ ಫಾರೂಖ್ ಹಬೀಬ್ ಹೇಳಿದ್ದಾರೆ.