ಕೀವ್, ಏ 05 (DaijiworldNews/DB): ರಷ್ಯಾ ಮತ್ತು ಉಕ್ರೇನ್ ನಡುವಿನ ಸಮರ ಮುಂದುವರಿಯುತ್ತಿದ್ದು, ರಷ್ಯಾ ಈಗಾಗಲೇ ಉಕ್ರೇನ್ ಗೆ ಸಾಕಷ್ಟು ನಷ್ಟವನ್ನುಂಟು ಮಾಡಿದೆ. ಈ ನಡುವೆ ರಷ್ಯಾದ ಯುದ್ಧದ ಹೆಲಿಕಾಪ್ಟರ್ ನ್ನು ಉಕ್ರೇನ್ನ ಕ್ಷಿಪಣಿಯು ಹೊಡೆದುರುಳಿಸಿದೆ.
ಬ್ರಿಟನ್ ನಲ್ಲಿ ವಿಮಾನ ಹೊಡೆಯುವ ಸುಧಾರಿತ ಕ್ಷಿಪಣಿಯನ್ನು ಬಳಸಿ ರಷ್ಯಾದ ಯುದ್ದ ಹೆಲಿಕಾಪ್ಟರ್ ನ್ನು ಪತನ ಮಾಡಲಾಗಿದ್ದು, ಇದು ಮೊದಲ ಬಾರಿಯಾಗಿದೆ ಎಂದು ವರದಿಗಳು ತಿಳಿಸಿವೆ.
ಸ್ಟಾರ್ಸ್ಟ್ರೀಕ್ ಹೈ-ವೇಗದ ಕ್ಷಿಪಣಿ ವ್ಯವಸ್ಥೆ ಇದಾಗಿದ್ದು, ರಷ್ಯಾದ ಎಂಐ-28ಎನ್ ಹೆಲಿಕಾಪ್ಟರ್ ಅನ್ನು ಹೊಡೆದುರುಳಿಸಿದೆ. ಹೊಡೆತದ ವೇಗಕ್ಕೆ ಹೆಲಿಕಾಪ್ಟರ್ ನ ಅರ್ಧ ಭಾಗ ಪುಡಿಯಾಗಿದೆ. ಈ ಎಲ್ಲಾ ದೃಶ್ಯಗಳು ವೀಡಿಯೋದಲ್ಲಿ ದಾಖಲಾಗಿವೆ.
4 ಮೈಲು ಅಥವಾ 7 ಕಿಮೀ ಗಳಷ್ಟು ದೂರದಲ್ಲಿರುವ ಗುರಿಗೆ ಹೊಡೆದು ಉರುಳಿಸಬಲ್ಲ ಸಾಮರ್ಥ್ಯ ಈ ಕ್ಷಿಪಣಿಗಿದೆ. ಇದರ ಪ್ರಯೋಗಕ್ಕೆ ಬ್ರಿಟೀಷ್ ಆಪರೇಟರ್ ಗಳಿಂದ ಉಕ್ರೇನ್ ಸೈನಿಕರು ಮೂರು ವಾರಗಳ ತರಬೇತಿ ಪಡೆದಿದ್ದಾರೆ.