ಕೀವ್, ಏ 07 (DaijiworldNews/HR): ರಷ್ಯಾ ಸೇನೆಯು ಬಂದರು ನಗರವಾದ ಮರಿಯುಪೋಲ್ಗೆ ಪ್ರವೇಶದಲ್ಲಿ 'ಸಾವಿರಾರು' ಜನರನ್ನು ಕೊಂದಿದ್ದು, ಅದರ ಪುರಾವೆಗಳನ್ನು ಮರೆಮಾಡಲು ಆ ಪ್ರದೇಶಕ್ಕೆ ನಿರ್ಭಂಧ ವಿಧಿಸಿದೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಆರೋಪಿಸಿದ್ದಾರೆ.
ಈ ಕುರಿತು ಮಾತನಾದಿದ ಅವರು, ರಷ್ಯಾ ಸೇನೆಯ ಕ್ರೂರ ಕೃತ್ಯ ಜಗತ್ತಿನ ಮುಂದೆ ಎಲ್ಲಿ ಬಯಲಾಗುತ್ತದೆಯೊ ಎಂಬ ಭಯದಲ್ಲಿರುವ ರಷ್ಯಾ, ನಮಗೆ ಮರಿಯುಪೋಲ್ಗೆ ಪ್ರವೇಶಿಸಲು ಅವಕಾಶ ನೀಡುತ್ತಿಲ್ಲ ಎಂದಿದ್ದಾರೆ.
ಇನ್ನು ಅದೊಂದು ದೊಡ್ಡ ದುರಂತ ಎಂದು ನಾನು ಭಾವಿಸುತ್ತೇನೆ, ಆ ಪ್ರದೇಶ ನರಕವಾಗಿದ್ದು, ಹತ್ತಾರು ಅಲ್ಲ ಸಾವಿರಾರು ಜನರು ಅಲ್ಲಿ ಕೊಲ್ಲಲ್ಪಟ್ಟಿದ್ದಾರೆ ಮತ್ತು ಸಾವಿರಾರು ಜನರು ಗಾಯಗೊಂಡಿದ್ದಾರೆ ಎಂದು ಹೇಳಿದ್ದಾರೆ.