ಲಂಡನ್, ಏ 08 (DaijiworldNews/HR): ಉತ್ತರ ಉಕ್ರೇನ್ನಿಂದ ರಷ್ಯಾದ ಪಡೆಗಳು ಈಗ ಬೆಲಾರಸ್ ಮತ್ತು ರಷ್ಯಾವರೆಗೆ ಸಂಪೂರ್ಣವಾಗಿ ಸೇನೆಯನ್ನು ಹಿಂತೆಗೆದುಕೊಂಡಿವೆ ಎಂದು ಬ್ರಿಟಿಷ್ ಮಿಲಿಟರಿ ಗುಪ್ತಚರ ಸಂಸ್ಥೆ ಮಾಹಿತಿ ನೀಡಿದೆ.
ಈ ಕುರಿತು ರಕ್ಷಣಾ ಸಚಿವಾಲಯ ಟ್ವಿಟರ್ನಲ್ಲಿ ಮಾಹಿತಿ ನೀಡಿದ್ದು, ಹಿಂತೆಗೆದುಕೊಂಡ ರಷ್ಯಾದ ಈ ಪಡೆಗಳಲ್ಲಿ ಕೆಲವನ್ನು ಪೂರ್ವ ಉಕ್ರೇನ್ನ ಡಾನ್ಬಾಸ್ನ ಆಕ್ರಮಣಕ್ಕೆ ನಿಯೋಜಿಸಲಾಗುತ್ತದೆ ಎಂದು ತಿಳಿಸಿದೆ.
ಇನ್ನು ಸೇನೆಯನ್ನು ಪೂರ್ವಕ್ಕೆ ನಿಯೋಜಿಸುವ ಮುನ್ನ ಅಗತ್ಯ ಸಿದ್ಧತೆ ಮಾಡಿಕೊಳ್ಳುವ ಅಗತ್ಯವಿದ್ದು, ಉತ್ತರದಿಂದ ಪೂರ್ವಕ್ಕೆ ಯಾವುದೇ ಸೇನೆಯನ್ನು ಮರುಹಂಚಿಕೆ ಮಾಡುವಾಗ ಕನಿಷ್ಠ ಒಂದು ವಾರ ಬೇಕಾಗಬಹುದು ಎಂದು ಸಚಿವಾಲಯ ಹೇಳಿದೆ.
ಫೆ.24ರಿಂದ ರಷ್ಯಾ, ಉಕ್ರೇನ್ ಮೇಲೆ ದಾಳಿ ಆರಂಭಿಸಿದೆ. ರಷ್ಯಾದ ಯುದ್ಧಾಪರಾಧಗಳ ಕುರಿತಂತೆ ಪಾಶ್ಚಿಮಾತ್ಯ ದೇಶಗಳಿಂದ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದೆ.