ಇಸ್ಲಮಾಬಾದ್, ಏ 10 (DaijiworldNews/DB): ವಿಶ್ವಾಸ ಮತ ಕಳೆದುಕೊಂಡ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅವರು ಕೊನೆಗೂ ಪ್ರಧಾನಿ ಹುದ್ದೆ ತ್ಯಜಿಸಿದ್ದಾರೆ. ಆ ಮೂಲಕ ಸುಮಾರು ಒಂದು ತಿಂಗಳ ರಾಜಕೀಯ ಬೆಳವಣಿಗೆಗಳು ಕೊನೆಯಾದಂತಾಗಿದೆ.
ಶನಿವಾರಮಧ್ಯರಾತ್ರಿವಿಶ್ವಾಸಮತ ಮಂಡನೆ ನಡೆದಿದ್ದು, ಆಡಳಿತ ಸರ್ಕಾರದ ವಿರುದ್ಧ 174 ಮಂದಿ ಸದಸ್ಯರು ಮತ ಚಲಾಯಿಸಿದ ಕಾರಣ ಬಹುಮತ ಕಳೆದುಕೊಂಡು ಸರ್ಕಾರ ಪತನಗೊಂಡಿತು. ಶನಿವಾರ ಅವಿಶ್ವಾಸ ಗೊತ್ತುವಳಿ ಎದುರಿಸಲು ಇಮ್ರಾನ್ ಗೆ ಸುಪ್ರೀಂ ಕೋರ್ಟ್ ಆದೇಶಿಸುತ್ತು. ಆದರೆ ಸ್ಪೀಕರ್ ಸಹಕಾರದೊಂದಿಗೆ ಶನಿವಾರವಿಡೀ ಇದು ಸಾಧ್ಯವಾಗಲಿಲ್ಲವಾದರೂ, ಮಧ್ಯರಾತ್ರಿ ಸರ್ಕಾರ ಪತನ ಅನಿವಾರ್ಯವಾಯಿತು. ಇದಕ್ಕೂ ಮೊದಲು ಸದನಕ್ಕೆ ಇಮ್ರಾನ್ ಗೈರು ಹಾಜರಾಗಿದ್ದರು.
ಇಮ್ರಾನ್ ಖಾನ್ ಸರ್ಕಾರ ನಡೆಸುವಲ್ಲಿ ವಿಫಲರಾಗಿದ್ದಾರೆ ಎಂದು ಆರೋಪಿಸಿ ವಿಪಕ್ಷಗಳು ಅವರ ವಿರುದ್ದ ಅವಿಶ್ವಾಸ ಗೊತ್ತುವಳಿ ಮಂಡಿಸಿದ್ದರು. ಇದಾದ ಬಳಿಕ ಒಂದು ತಿಂಗಳ ಕಾಲ ರಾಜಕೀಯ ಪ್ರಹಸನಗಳು ನಡೆದಿದ್ದವು. ಈ ನಡುವೆ ತಮ್ಮನ್ನು ಅಧಿಕಾರದಿಂದ ಕೆಳಗಿಳಿಸಲು ವಿದೇಶೀ ಪಿತೂರಿ ನಡೆಯುತ್ತಿದೆ ಎಂದೂ ಇಮ್ರಾನ್ ಈ ಹಿಂದೆ ಆರೋಪಿಸಿದ್ದರು.