ಎಲ್ವಿವ್, ಏ 11 (DaijiworldNews/HR): ಯುದ್ಧ ಅಪರಾಧಗಳ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳಲು ರಷ್ಯಾ ಪ್ರಯತ್ನಿಸುತ್ತಿದೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಆರೋಪಿಸಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಜನರು ತಮ್ಮ ತಪ್ಪುಗಳನ್ನು ಒಪ್ಪಿಕೊಳ್ಳಲು, ಕ್ಷಮೆಯಾಚಿಸಲು, ವಾಸ್ತವಕ್ಕೆ ಹೊಂದಿಕೊಳ್ಳಲು ಮತ್ತು ಕಲಿಯಲು ಧೈರ್ಯವಿಲ್ಲದಿದ್ದಾಗ ರಾಕ್ಷಸರಾಗುತ್ತಾರೆ. ತಪ್ಪು ಮಾಡುತ್ತಿರುವ ರಷ್ಯಾ ಅಧ್ಯಕ್ಷರು ಎಲ್ಲವನ್ನೂ ಒಪ್ಪಿಕೊಳ್ಳಬೇಕಾದ ದಿನ ಬರುತ್ತದೆ, ಸತ್ಯವನ್ನು ಒಪ್ಪಿಕೊಳ್ಳಲೇ ಬೇಕಾಗುತ್ತದೆ ಎಂದರು.
ಇನ್ನು ಉಕ್ರೇನ್ಗೆ ಹೆಚ್ಚಿನ ನೆರವು ನೀಡುವಂತೆ ಜರ್ಮನಿ ಸೇರಿದಂತೆ ಪಾಶ್ಚಿಮಾತ್ಯ ರಾಷ್ಟ್ರಗಳಿಗೆ ಮತ್ತೊಮ್ಮೆ ಕರೆ ನೀಡಿದ ಝೆಲೆನ್ಸ್ಕಿ, ಜರ್ಮನ್ ಇತ್ತೀಚೆಗೆ ಉಕ್ರೇನ್ ಪರವಾಗಿ ಬದಲಾಗಿದೆ ಎಂದು ಹೇಳಲು ನನಗೆ ಸಂತೋಷವಾಗುತ್ತಿದೆ ಎಂದು ಹೇಳಿದ್ದಾರೆ.