ಇಸ್ಲಾಮಾಬಾದ್, ಏ 11 (DaijiworldNews/SM): ಭಾರತದೊಂದಿಗೆ ಉತ್ತಮ ಬಾಂಧವ್ಯ ಬೆಳೆಸಬೇಕಾದರೆ, ಕಾಶ್ಮೀರ ವಿವಾದವನ್ನು ಬಗೆಹರಿಸಬೇಕೆಂದು ಪಾಕ್ ನ ನೂತನ ಪ್ರಧಾನಿ ಶೆಹಬಾಜ್ ಷರೀಫ್ ಹೇಳಿದ್ದಾರೆ.
ಇಮ್ರಾನ್ ಖಾನ್ ಅವರನ್ನು ಪ್ರಧಾನಿ ಹುದ್ದೆಯಿಂದ ತೆರವುಗೊಳಿಸಿದ್ದು, ಇದೀಗ ಆ ಸ್ಥಾನಕ್ಕೆ ನೂತನ ಪ್ರಧಾನಿಯಾಗಿ ಶಾಹಬಾಜ್ ಅವರನ್ನು ನೇಮಕ ಮಾಡಲಾಗಿದೆ. ಬಳಿಕ ತಮ್ಮ ಮೊದಲ ಭಾಷಣದಲ್ಲಿ ಮಾತನಾಡಿದ ಅವರು, ನೆರೆ ರಾಷ್ಟ್ರಗಳ ಜೊತೆಗಿನ ಸಂಬಂಧದ ಕುರಿತು ಅವರು ಮಾತನಾಡಿದರು. ಭಾರತದೊಂದಿಗೆ ಉತ್ತಮ ಬಾಂಧವ್ಯ ಹೊಂದಬೇಕೆನ್ನುವುದು ನನ್ನ ಇಂಗಿತ. ಆದರೆ, ಮೊದಲು ಕಾಶ್ಮೀರ ವಿವಾದ ಬಗೆಹರಿಯಬೇಕು. ನೆರೆಯ ದೇಶಗಳೊಂದಿಗೆ ದ್ವೇಷವನ್ನಿರಿಸಿ ಆಡಳಿತ ನಡೆಸಲು, ಬದುಕು ಸಾಧಿಸಲು ಸುಲಭದ ವಿಚಾರವಲ್ಲ ಎಂದರು. ಇನ್ನು ಸದ್ಯ ಕಾಶ್ಮೀರ ವಿಚಾರಕ್ಕೆ ಸಂಬಂಧಿಸಿದಂತೆ ಭಾರತ-ಪಾಕಿಸ್ತಾನದ ನಡುವಿನ ಸಂಬಂಧ ಉತ್ತಮವಾಗಿರದ ಕಾರಣ ಅವರು ಅಸಮಾಧಾನ ಹೊರಹಾಕಿದರು.
ಭಾರತದೊಂದಿಗೆ ನಮಗೆ ಉತ್ತಮ ಬಾಂಧವ್ಯದ ಅವಶ್ಯಕತೆಯಿದೆ. ಆದರೆ, ಮೊದಲು ಕಾಶ್ಮೀರ ವಿವಾದ ಬಗೆಹರಿಯಬೇಕು. ಆ ಬಳಿಕ ಶಾಂತಿಯುತವಾಗಿ ಸಂಬಂಧ ಬೆಳೆಸಿಕೊಳ್ಳಲು ನಾವು ಸಿದ್ಧರಿದ್ದೇವೆ ಎಂದು ಅವರು ತಿಳಿಸಿದ್ದಾರೆ.