ನ್ಯೂಯಾರ್ಕ್, ಏ 13 (DaijiworldNews/MS): ನಗರದ ಬ್ರೂಕ್ಲಿನ್ ರೈಲು ನಿಲ್ದಾಣದಲ್ಲಿ ಮಂಗಳ ವಾರ ನಡೆದ ಗುಂಡು ಹಾರಾಟ ಪ್ರಕರಣದಲ್ಲಿ ಕನಿಷ್ಠ 16 ಮಂದಿ ಗಾಯಗೊಂಡಿದ್ದಾರೆ ಅಮೆರಿಕದ ಕಾನೂನು ನಿರ್ದೇಶನಾಲಯ ತಿಳಿಸಿದೆ. ಗಾಯಾಳುಗಳನ್ನು ಸಮೀಪದ ವಿವಿಧ ಆಸ್ಪತ್ರೆಗೆ ದಾಖಲಿಸಲಾಗಿದೆ.
ಅಪರಿಚಿತ ದುಷ್ಕರ್ಮಿಯೋರ್ವ ಜನರು ಕಚೇರಿಗೆ ತೆರಳುವ ಸಂದರ್ಭವನ್ನೇ ನೋಡಿಕೊಂಡು ಈ ಕೃತ್ಯ ಎಸಗಿದ್ದಾನೆ ಎಂದಿದ್ದು, ಅಮೆರಿಕ ಪೊಲೀಸರು ಉಗ್ರ ಕೃತ್ಯವನ್ನು ತಳ್ಳಿಹಾಕಿದ್ದಾರೆ.
ಸ್ಥಳೀಯ ಕಾಲಮಾನ ಬೆಳಗ್ಗೆ 8.30ರ ಸುಮಾರಿಗೆ ಬ್ರೂಕ್ಲಿನ್ನ ಸನ್ಸೆಟ್ ಪಾರ್ಕ್ನ ಸುತ್ತಮುತ್ತ ಗುಂಡಿನ ದಾಳಿ ನಡೆದಿದ್ದು, ಪೊಲೀಸರು ಸ್ಥಳಕ್ಕೆ ಧಾವಿಸುವಷ್ಟರಲ್ಲಿ ರೈಲು ನಿಲ್ದಾಣದ ಪ್ಲಾಟ್ಫಾರಂನಲ್ಲಿ ಜನರು ಭಯಬೀತರಾಗಿ ಓಡುತ್ತಿದ್ದರು.
ಗುಂಡಿನ ಮಳೆಗೆರದ ದುಷ್ಕರ್ಮಿ ಎತ್ತರ ಅಂದಾಜು 5 ಅಡಿ 5 ಇಂಚು ಎತ್ತರ ಹಾಗೂ 180 ಪೌಂಡ್ ತೂಕವಿದ್ದ ಎಂದು ಪೊಲೀಸರು ವಿವರಿಸಿದ್ದಾರೆ. ಒಂಟಿಯಾಗಿ ಸಬ್ವೇ ನಿಲ್ದಾಣವನ್ನು ಗುರಿಯಾಗಿಸಿಕೊಂಡು ಆರೋಪಿ ಗುಂಡಿನ ದಾಳಿ ನಡೆಸಿದ್ದಾನೆ. ಈತನ ಪತ್ತೆಗೆ ಹಾಗೂ ಈ ಕೃತ್ಯಕ್ಕೆ ಪ್ರಚೋದನೆ ಏನು ಎಂಬುದರ ತನಿಖೆಯನ್ನು ಪೊಲೀಸರು ಆರಂಭಿಸಿದ್ದಾರೆ.