ನ್ಯೂಯಾರ್ಕ್, ಏ 14 (DaijiworldNews/MS): ನ್ಯೂಯಾರ್ಕ್ನ ಬ್ರೂಕ್ಲಿನ್ನಲ್ಲಿರುವ ಮೆಟ್ರೋ ಸುರಂಗಮಾರ್ಗ ನಿಲ್ದಾಣದಲ್ಲಿ ಸಾರ್ವಜನಿಕರ ಮೇಲೆ ಗುಂಡಿನ ದಾಳಿ ನಡೆಸಿದ ಆರೋಪಿಯನ್ನು ಬಂಧಿಸುವಲ್ಲಿ ನ್ಯೂಯಾರ್ಕ್ನ ಪೋಲೀಸರು ಯಶಸ್ವಿಯಾಗಿದ್ದಾರೆ.
ಬಂಧಿತನನ್ನು 62 ವರ್ಷದ ಫ್ರಾಂಕ್ ಜೇಮ್ಸ್ ಎಂದು ಗುರುತಿಸಲಾಗಿದೆ. ಈತ ಏಪ್ರಿಲ್ 12 ಮಂಗಳವಾರದಂದು ಸುರಂಗಮಾರ್ಗ ಪ್ರವೇಶಿಸಿ ಏಕಾಏಕಿ ಗುಂಡಿನ ದಾಳಿ ನಡೆಸಿ 10 ಜನ ಅಮಾಯಕರ ಸಾವಿಗೆ ಕಾರಣವಾಗಿದ್ದ. ಈ ಘಟನೆ ನಡೆದ 30 ಘಂಟೆಗಳ ಒಳಗೆ ಫೆಡರಲ್ ಭಯೋತ್ಪಾದನಾ ಆರೋಪದ ಅಡಿಯಲ್ಲಿ ಆತನನ್ನು ವಶಕ್ಕೆ ಪಡೆಯಲಾಗಿದೆ.
ಮ್ಯಾನ್ಹ್ಯಾಟನ್ ಬೀದಿಯಲ್ಲಿ ಅಧಿಕಾರಿಗಳು ಜೇಮ್ಸ್ನನ್ನು ಗುರುತಿಸಿ ಆತನನ್ನು ಬಂಧಿಸಲಾಯಿತು ಎಂದು ನ್ಯೂಯಾರ್ಕ್ ಪೊಲೀಸ್ ಇಲಾಖೆಯ ಕಮಿಷನರ್ ಕೀಚಂಟ್ ಸೆವೆಲ್ ಹೇಳಿದ್ದಾರೆ.
ಜೇಮ್ಸ್ ಯೂಟ್ಯೂಬ್ನಲ್ಲಿ ಹಲವಾರು ವೀಡಿಯೊಗಳನ್ನು ಪೋಸ್ಟ್ ಮಾಡಿದ್ದಾನೆ. ಜನಾಂಗೀಯತೆ, ಹಿಂಸಾಚಾರ, ಮಾನಸಿಕ ಅಸ್ವಸ್ಥತೆ ಮುಂತಾದ ವಿಚಾರಗಳ ಬಗ್ಗೆ ಹಲವು ವೀಡಿಯೋಗಳನ್ನು ಪೋಸ್ಟ್ ಮಾಡಿದ್ದ. YouTube ನ ಸಮುದಾಯ ಮಾರ್ಗಸೂಚಿಗಳನ್ನು ಉಲ್ಲಂಘಿಸಿದ್ದಕ್ಕಾಗಿ ಅವರ ಖಾತೆಯನ್ನು ಬುಧವಾರದ ನಂತರ ತೆಗೆದುಹಾಕಲಾಗಿದೆ.