ವಾಷಿಂಗ್ಟನ್, ಏ 15 (DaijiworldNews/DB): ಮಹಾವೀರ ಜಯಂತಿಯ ಶುಭ ಸಂದರ್ಭದಲ್ಲಿಅಮೆರಿಕಾ ಅಧ್ಯಕ್ಷ ಜೋ ಬೈಡೆನ್ ಅವರು ಜನತೆಗೆ ಶುಭಾಶಯ ತಿಳಿಸಿದ್ದಾರೆ.
ಟ್ವೀಟರ್ನಲ್ಲಿ ಬರೆದುಕೊಂಡ ಅವರು, ಜೈನ ಸಮುದಾಯದ ಜನರಿಗೆ ಮಹಾವೀರ ಜಯಂತಿಯ ಶುಭಾಶಯಗಳು. ಈ ದಿನವು ಎಲ್ಲರಿಗೂ ಶಾಂತಿ, ಸಂತೋಷ ಮತ್ತು ಯಶಸ್ವಿಯನ್ನು ಒದಗಿಸಲಿ ಎಂದು ಬರೆದುಕೊಂಡಿದ್ದಾರೆ.
ಮಹಾವೀರ ದೇವರು ನೀಡಿದ ಮೌಲ್ಯಗಳಾದ ಸತ್ಯಾನ್ವೇಷಣೆಯೊಂದಿಗೆ ಹಿಂಸೆಯ ಬದಲಾಗಿ ಅಹಿಂಸಾ ತತ್ವವನ್ನು ಸ್ವೀಕರಿಸಿ, ಪರಸ್ಪರ ಸೌಹಾರ್ದದಿಂದ ಬದುಕಲು ಕಲಿಯೋಣ ಎಂದು ಅವರು ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ. ಈ ಶುಭಾಶಯವನ್ನು ಅವರು ತಮ್ಮ ಪತ್ನಿ ಮತ್ತು ತಮ್ಮ ಪರವಾಗಿ ವ್ಯಕ್ತಪಡಿಸುವುದಾಗಿ ಹೇಳಿದ್ದಾರೆ.