ಕೀವ್, ಏ 16 (DaijiworldNews/DB): ಉಕ್ರೇನ್ ಮೇಲೆ ರಷ್ಯಾ ಪಡೆಗಳು ನಡೆಸಿದ ಯುದ್ದದಲ್ಲಿ ಉಕ್ರೇನ್ನ ಸುಮಾರು 3000 ಮಂದಿ ಸೈನಿಕರು ಅಸುನೀಗಿದ್ದಾರೆ ಎಂದು ಉಕ್ರೇನ್ ಅಧ್ಯಕ್ಷ ವೊಲೆಡಿಮಿರ್ ಝೆಲೆನ್ಸ್ಕಿ ಹೇಳಿದ್ದಾರೆ.
ಸುದ್ದಿಸಂಸ್ಥೆಯೊಂದರ ಜೊತೆ ಮಾತನಾಡಿದ ಅವರು, ರಷ್ಯಾ ಆಕ್ರಮಣದಿಂದಾಗಿ ಉಕ್ರೇನ್ ಸಾಕಷ್ಟು ಸಾವು-ನೋವು, ಆಸ್ತಿಪಾಸ್ತಿ ಹಾನಿಯನ್ನು ಅನುಭವಿಸಬೇಕಾಗಿ ಬಂದಿದೆ. ಸುಮಾರು 3000 ಮಂದಿ ಸೈನಿಕರು ಈ ದಾಳಿಯಿಂದಾಗಿ ಪ್ರಾಣ ಕಳೆದುಕೊಂಡರೆ 10 ಸಾವಿರಕ್ಕೂ ಹೆಚ್ಚು ಸೈನಿಕರು ಗಾಯಾಳುಗಳಾಗಿದ್ದಾರೆ ಎಂದಿದ್ದಾರೆ.
ಕಲಿಬ್ ಕ್ಷಿಪಣಿಗಳನ್ನು ಸಮುದ್ರದಿಂದ ಉಡಾಯಿಸಿ ಕೀವ್ ಸನಿಹದ ವಿಶ್ನೆವೆ ಪಟ್ಟಣವನ್ನು ಗುರುವಾರ ರಷ್ಯಾಪಡೆ ಧ್ವಂಸಗೊಳಿಸಿದೆ. ಈಗಾಗಲೇ ಉಕ್ರೇನ್ನ ಹಲವು ನಗರ, ಪ್ರಮುಖ ಕೇಂದ್ರಗಳ ಮೇಲೆ ಮತ್ತು ವಾಯುನೆಲೆಗಳ ಮೇಲೆ ಶೆಲ್ ಹಾಗೂ ಕ್ಷಿಪಣಿ ದಾಳಿ ನಡೆಸಿ ಸಾಕಷ್ಟು ಹಾನಿ ಉಂಟು ಮಾಡಿದೆ. ರಷ್ಯಾ ಅಣ್ವಸ್ತ್ರ ದಾಳಿ ನಡೆಸುವುದಕ್ಕೂ ಹಿಂದೆ ಮುಂದು ನೋಡುವುದಿಲ್ಲ. ಇದು ಜಗತ್ತಿನ ಎಲ್ಲಾ ರಾಷ್ಟ್ರಗಳು ಯೋಚಿಸಬೇಕಾದ ಸಂದರ್ಭವಾಗಿದೆ ಎಂದವರು ತಿಳಿಸಿದ್ದಾರೆ.