ಕೀವ್, ಏ 16 (DaijiworldNews/MS): ರಷ್ಯಾ ಅತಿಕ್ರಮಣವು ಕುಂಠಿತವಾಗುತ್ತಿದ್ದು, ಇದರ ಹತಾಶೆಯಿಂದ ಆ ದೇಶ ಪರಮಾಣು ಶಸ್ತ್ರಾಸ್ತ್ರಗಳನ್ನು ಬಳಸಬಹುದು ಎಂಬ ಆತಂಕವನ್ನು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ವ್ಯಕ್ತಪಡಿಸಿದ್ದಾರೆ.
ರಷ್ಯಾಕ್ಕೆ ಜನರ ಜೀವನ ಏನೂ ಅಲ್ಲ, ಹೀಗಾಗಿ ರಾಸಾಯನಿಕ ಶಸ್ತ್ರಾಸ್ತ್ರಗಳ ಬಗ್ಗೆ ಮಾತನಾಡಲು ಪ್ರಾರಂಭಿಸಿದೆ ಅಂದರೆ 'ಇಡೀ ಜಗತ್ತು ಕಳವಳಗೊಳ್ಳಬೇಕಿದೆ' ಅವರು ಖಂಡಿತವಾಗಿ ಬಳಸಬಹುದು ಎಂದು ಹೇಳಿದ್ದಾರೆ.
ರಷ್ಯಾವನ್ನು ಭಯೋತ್ಪಾದನೆ ಪ್ರಾಯೋಜಿತ ದೇಶ ಎಂದು ಘೋಷಿಸುವಂತೆ ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರಿಗೆ ಮನವಿ ಮಾಡಿದ್ದಾರೆ.
ಆದರೆ ರಷ್ಯಾ ಯಾವುದೇ ರೀತಿ ಪರಮಾಣು ದಾಳಿಯ ಚಟುವಟಿಕೆ -ಚಲನೆಗಳು ಕಂಡುಬಂದಿಲ್ಲ ಎಂದು ಹೇಳಿದೆ.